ಹತ್ಯೆಯಾದ ಅಕ್ಷಯ್ ಕಲ್ಲೇಗ ಮನೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ

ಪುತ್ತೂರು: ಸೋಮವಾರ ತಡರಾತ್ರಿ ಹತ್ಯೆಯಾದ  ಕಲ್ಲೇಗ ಟೈಗರ್ಸ್ ಸ್ಥಾಪಕ ಅಕ್ಷಯ್ ಕಲ್ಲೇಗ  ಮನೆಗೆ ಅರುಣ್  ಪುತ್ತಿಲ ಭೇಟಿ  ನೀಡಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಅರುಣ್ ಕುಮಾರ್ ಪುತ್ತಿಲ ಇಂದು ಅಕ್ಷಯ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. 

ಘಟನೆ ನಡೆದ ದಿನವೇ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ, ಅಕ್ಷಯ್ ಕಲ್ಲೇಗ ಕೊಲೆ ಆರೋಪಿಗಳಿಗೆ ಕಾನೂನು ಪ್ರಕಾರ ಸೂಕ್ತ ಶಿಕ್ಷೆ ಆಗಬೇಕು ಎಂದ ಅವರು, ಮಾಧ್ಯಮಗಳಲ್ಲಿ ವರದಿಯಾದಂತೆ,  ಪುತ್ತೂರಿನಲ್ಲಿ ಠಾಣೆಯ ಹಿಡಿತದಲ್ಲಿರುವ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಇಲಾಖೆ ಆದಷ್ಟು ಶೀಘ್ರ ಪುತ್ತೂರಿನ ಸಿಸಿಟಿವಿಗಳನ್ನು ಸರಿ ಮಾಡಿ ರಾತ್ರಿ ಹೊತ್ತು ಗಸ್ತು ಹೆಚ್ಚಿಸಬೇಕು ಎಂದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top