ವಿಟ್ಲ: ಅಳಿಕೆ ಗ್ರಾಪಂ ವತಿಯಿಂದ ಉದ್ಯೊಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಸಂಜೀವಿನಿ ಕಟ್ಟಡದ ಉದ್ಘಾಟನಾ ಸಮಾರಂಭವು ಹಾಗೂ ಸ್ವಚ್ಚತಾ ವಾಹನದ ಚಾಲನಾ ಕಾರ್ಯಕ್ರಮ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕುಟುಂಬ ನಿರ್ಹವಣೆ ಜೊತೆ ಕುಟುಂಬದ ಹಿತಕ್ಕಾಗಿ ಕೆಲಸ ಮಾಡುವ ಮಹಿಳೆ ಕುಟುಂಬದ ಜೊತೆ ಈ ದೇಶದ ದೊಡ್ಡ ಸಂಪತ್ತಾಗಿದ್ದಾರೆ. ಪ್ರಸ್ತುತ ಮಹಿಳೆಯರು ಸಂಘಟನೆಯ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರಬೇಕು . ಸಣ್ಣ ಉದ್ಯಮಗಳ ಕಡೆ ಹೆಚ್ಚು ಒಲವು ತೋರುವ ಕೆಲಸವನ್ನುಮಾಡಬೇಕು ಮತ್ತು ಸಣ್ಣ ಉದ್ಯಮವನ್ನು ನಡೆಸುವ ಮೂಲಕ ಮಹಿಳೆಯರೂ ಸ್ವಾವಲಂಬಿಗಳಾಗಬೇಕು ಎಂದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಣ ಪದ್ಮನಾಭ ಪೂಜಾರಿ, ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ ಭಟ್, ಬಂಟ್ವಾಳ ತಾಲೂಕು ಇ.ಒ ಮಹೇಶ್ ಕುಮಾರ್, ಉದ್ಯೋಗ ಖಾತರಿ ನಿರ್ದೆಶಕ ದಿನೇಶ್, ಒಕ್ಕೂಟದ ಮೇಲ್ವಿಚಾರಕಿ ಕುಸುಮ, ಗ್ರಾಪಂ ಉಪಾಧ್ಯಕ್ಷೆ ಭಾಗೀರಿ, ಪಿಡಿಒ ದನಂಜಯ, ಗ್ರಾಪಂ ಸದಸ್ಯರುಗಳು ಉಪಸ್ಥಿತರಿದ್ದರು.
ನಿವೃತ್ತ ಪಿಡಿಒ ಜಿನ್ನಪ್ಪ ಗೌಡ ರನ್ನು ಕಾರ್ಯಕ್ರಮದಲ್ಲಿ ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯ ಕಾನ ಈಶ್ವರ ಭಟ್ ಸ್ವಾಗತಿಸಿದರು.