ಸುಬ್ರಹ್ಮಣ್ಯ: ಡಾlರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ವತಿಯಿಂದ ಭಾನುವಾರ ಸುಬ್ರಹ್ಮಣ್ಯದ ಸ್ಥಾನಘಟ್ಟ, ಪರ್ವತಮಕಿ, ಪಾರ್ಕಿಂಗ್ ಸ್ಥಳ ,ಹಾಗೂ ಕುಲುಕುಂದ ರಸ್ತೆ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಯಿತು.
ಪ್ರತಿ ವಾರದ ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ಈ ಸ್ಥಾನಘಟ್ಟ ಹಾಗೂ ಆಸುಪಾಸಿನಲ್ಲಿ ಭಕ್ತಾದಿಗಳು ಪ್ಲಾಸ್ಟಿಕ್, ಕಸಕಡ್ಡಿಗಳು, ಬ್ಯಾಗ್, ಕಾಗದ, ನೀರಿನ ಬಾಟಲಿಗಳು ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನ ಎಲ್ಲೆಂದರಲ್ಲಿ ಬಿಸಾಡಿ ಇಡೀ ಪರಿಸರ ಮಾಲಿನ್ಯವಾಗಿದ್ದು, ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಎಷ್ಟೇ ಮಾಹಿತಿಗಳನ್ನು ನೀಡಿರೂ ಪರಿಸರ ಮಾಲಿನ್ಯಗೊಳಿಸುವುದನ್ನು ಬಿಟ್ಟಿಲ್ಲ. ಸಾನಘಟ್ಟದಲ್ಲಿ ಧ್ವನಿವರ್ಧಕದ ಮೂಲಕ ಭಕ್ತಾದಿಗಳಿಗೆ ಆಗಾಗ ಎಚ್ಚರಿಕೆ ಕೂಡ ನೀಡಲಾಗುತ್ತಿದೆ .ಅಲ್ಲಲ್ಲಿ ಪಲಕಗಳನ್ನು ಕೂಡ ಹಾಕಲಾಗಿರುತ್ತದೆ .ಅದಲ್ಲದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಸೆಕ್ಯೂರಿಟಿ ಗಾರ್ಡುಗಳು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ವ್ಯವಸ್ಥೆಗಳಿದ್ದರೂ ಕೂಡ ಎರಡು ದಿನಕ್ಕೊಮ್ಮೆ ಮತ್ತೆ ಎಲ್ಲ ಸ್ಥಳಗಳು ಗಲೀಜು ಆಗಿರುವುದು ಕಂಡುಬರುತ್ತದೆ.
ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನವರು ಪ್ರತಿ ಬಾನುವಾರ ತನ್ನ ಸುಮಾರು 60 ಸ್ವಯಂಸೇವಕಗಳನ್ನು ಒಳಗೊಂಡು ಬೆಳಿಗ್ಗೆ ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಈ ಬಾರಿ ಅವರೊಂದಿಗೆ ಸುಬ್ರಹ್ಮಣ್ಯ ಲೀಜನ ಸೀನಿಯರ್ ಚೇಂಬರ್ ನ ಸದಸ್ಯರು ಕೂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.
ಡಾl ರವಿ ಕಕ್ಕೆ ಪದವು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಮಣ್ಯ ಲಿಜನ್ ಅಧ್ಯಕ್ಷ ವಿಶ್ವನಾಥ ನಡು ತೋಟ ಹಾಗೂ ಸದಸ್ಯರು ಭಾಗಿಯಾಗಿದ್ದರು.