ಪುತ್ತೂರು: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಬಕದಲ್ಲಿ ನಡೆದಿದೆ.
ಕಡಬಕ ಗ್ರಾಮದ ತೋಟಗಾರಿಕೆ ಇಲಾಖೆ ಬಳಿಯ ಜನತಾ ಕಾಲನಿ ನಿವಾಸಿ ವಿ.ಪಿ.ವೇಣು (44) ಮನೆ ಸಮೀಪದ ಬಾವಿಗೆ ಬಿದ್ದು ಮೃತಪಟ್ಟವರು.
ಪಿ.ಕೆ.ವಿಜಯ ಎಂಬವರ ಪುತ್ರರಾಗಿರುವ ವೇಣು ಅವರು ಹಲವು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ನ.4 ರಂದು ಕಾಣೆಯಾಗಿದ್ದ ಅವರನ್ನು ಹುಡುಕಾಡಿದಾಗ ಮನೆ ಸಮೀಪದ ಸರಕಾರಿ ಬಾವಿ ಬಳಿ ಚಪ್ಪಲಿ ಇರುವ ಮಾಹಿತಿ ತಿಳಿದು ಅಗ್ನಿಶಾಮಕ ದಳದವರನ್ನು ಕರೆಸಲಾಗಿತ್ತು. ಅಗ್ನಿಶಾಮಕ ದಳದವರು ಬಂದು ಬಾವಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಮೃತರ ತಂದೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.