ಸತ್ಯಕ್ಕೆ ದೂರವಾದ ವರದಿ ಬಿತ್ತರ : ಕನ್ನಡ ನ್ಯೂಸ್ ಚಾನೆಲ್ ವಿರುದ್ಧ ಜಿಲ್ಲೆಯ ಸಮಸ್ತ ಒಕ್ಕಲಿಗ ಸಮುದಾಯದಿಂದ ಖಂಡನೆ | ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ.

ಮಂಗಳೂರು: ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ 3.75 ಲಕ್ಷಕ್ಕಿಂತ ಅಧಿಕ ಮತದಾರರನ್ನು ಹೊಂದಿದ್ದು, ಇದು ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಆಯೋಗ ನೀಡಿದ ವರದಿ ಹಾಗೂ ಒಕ್ಕಲಿಗರ ಸಂಘವು ನೀಡಿದ ಆಂತರಿಕ ಅಂಕಿಅಂಶವಾಗಿದೆ. ಆದರೆ ಕನ್ನಡ ನ್ಯೂಸ್ ಚಾನೆಲ್ ಒಂದು ತನ್ನ ವರದಿಯಲ್ಲಿ ದ.ಕ.ಜಿಲ್ಲೆಯಲ್ಲಿ ಕೇವಲ 80 ಸಾವಿರ ಅಂತ ಬಿಂಬಿಸಿ ನಿಕೃಷ್ಟ ಮತ್ತು ತಾತ್ಸಾರ ವರದಿ ನೀಡಿರುವುದು ಸಮುದಾಯದಲ್ಲಿ ಆಕ್ರೋಶ ಮತ್ತು ತಳಮಳಕ್ಕೆ ಕಾರಣವಾಗಿದೆ. ಅಧ್ಯಯನ ಪೂರಕ, ವಸ್ತುನಿಷ್ಠ ಸಂತ್ಯಾಂಶರಹಿತ ವರದಿ ಪ್ರಕಟಿಸಿರುವುದು ಮಾಧ್ಯಮದ ಘನತೆಗೆ ತಕ್ಕುದಲ್ಲ ಎಂದು ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ತಿಳಿಸಿದೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ., ಕರ್ನಾಟಕ ರಾಜ್ಯಾ ಹಾಗೂ ದ.ಕ.ಜಿಲ್ಲೆಯಲ್ಲಿ ಎರಡನೇ  ಅತೀ ದೊಡ್ಡ ಸಮುದಾಯವಾಗಿರುವ ಒಕ್ಕಲಿಗ ಸಮುದಾಯವನ್ನು ರಾಜಕೀಯವಾಗಿ ತುಳಿಯಲು ದುರುದ್ದೇಶಪೂರಿತ ಕಪೋಕಲ್ಪಿತ ಸುದ್ದಿಯನ್ನು ಬಿತ್ತರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಸತ್ಯ, ಧರ್ಮ, ನಿಷ್ಠೆಯಲ್ಲಿ ಒಕ್ಕಲಿಗ ರಾಜಪರಂಪರೆಯ ಹಿನ್ನಲೆಯ ಸಮುದಾಯವಾಗಿದ್ದು, ಒಕ್ಕಲಿಗರು ಕೇವಲ ಕೃಷಿಕರಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಬದಲಾಗಿ ಶೈಕ್ಷಣಿಕ, ವೈದ್ಯಕೀಯ, ರಾಜಕೀಯ, ಆರ್ಥಿಕ, ಸಾಮಾಜಿಕವಾಗಿಯೂ ಇತರ ಪ್ರಭಾವೀ ಸಮುದಾಯಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಒಕ್ಕಲಿಗ ಸಮುದಾಯ ಬೆಂಗಳುರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ, ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಮುಖ್ಯಮಂತ್ರಿ ಸೇರಿದಂತೆ ಏಳು ಮುಖ್ಯಮಂತ್ರಿಗಳನ್ನು ನೀಡಿದ ಸಮುದಾಯವಾಗಿದೆ. ಕರ್ನಾಟಕದ ವಿಧಾನಸೌಧ ಕಟ್ಟಿಸಿದವರು ಮೊದಲ ರಾಷ್ಟ್ರಕವಿಯನ್ನು ನೀಡಿದ ಸಮುದಾಯ ಎಂದು ಅವರು ತಿಳಿಸಿದರು.

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿ ಒಕ್ಕಲಿಗ ಗೌಡ ಸಮುದಾಯದ ಪರ ಅಭ್ಯರ್ಥಿಗಳಿಗೆ ಹೆಚ್ಚಿನ ಪೂರಕ ವಾತಾವರಣವಿರುವುದು ದಟ್ಟವಾಗಿದೆ. ರಾಜಕೀಯ ದುರುದ್ದೇಶಪೂರಿತವಾಗಿ ಸಮುದಾಯಕ್ಕೆ ಅವಕಾಶವನ್ನು ತಪ್ಪಿಸುವ ನಿಟ್ಟಿನಲ್ಲಿ ಕೇವಲ 80 ಸಾವಿರವಷ್ಟೇ ಹೊಂದಿರುವ ಸಮುದಾಯ ಎಂದು ಕೀಳು ಮಟ್ಟದಲ್ಲಿ ಗುರುತಿಸಲಾಗಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.



































 
 

ಆದ್ದರಿಂದ ೊಕ್ಕಲಿಗ ಸಮುದಾಯದ ದ.ಕ. ಜಿಲ್ಲೆಯ ಮತದಾರರ ಸತ್ಯಕ್ಕೆ ದೂರವಾದ ಅಂಕಿ ಅಂಶಗಳನ್ನು ಪ್ರಕಟಿಸಿದ ಕನ್ನಡ ನ್ಯೂಸ್ ಚಾನೆಲ್ ವರದಿಯನ್ನು ಇಡೀ ಜಿಲ್ಲೆಯ ಸಮಸ್ತ ಒಕ್ಕಲಿಗ ಸಮುದಾಯ ತೀವೃವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘ ಕಾರ್ಯದರ್ಶಿ ಡಿ.ಬಿ.ಬಾಲಕೃಷ್ಣ, ಮಂಗಳೂರು ವಿಜಿಯಸ್ ಸಹಕಾರಿ ನಿಯಮಿತದ ಅಧ್ಯಕ್ಷ ಲೋಕಯ್ಯ ಗೌಡ, ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಖಜಾಂಚಿ ನವೀನ್ ಚಿಲ್ಪಾರ್, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಕೆ.ಎಂ., ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನಿರ್ದೇಶಕ ರಕ್ಷಿತ್ ಪುತ್ತಿಲ, ಸೇವಾ ಸಂಘದ ಯುವ ಘಟಕದ ಕಾರ್ಯದರ್ಶಿ ಕಿರಣ್ ಹೊಸೊಳಿಕೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top