ಪುತ್ತೂರು: ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸಮೀಪ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಪ್ರಾಯೋಜಿತ ಪ್ರವಾಸಿ ಕಾರು ತಂಗುದಾಣವನ್ನು ಉದ್ಘಾಟಿಸಲಾಯಿತು.
ರೋಟರಿ ಸಹಾಯಕ ಗವರ್ನರ್ ಪುರಂದರ ರೈ ತಂಗುದಾಣವನ್ನು ಉದ್ಘಾಟಿಸಿದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ. ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ಯೋಜನೆಯಾದ ರಸ್ತೆ ಸುರಕ್ಷತೆ ಕುರಿತಾದ ಮಾಹಿತಿ ಪತ್ರ ಮತ್ತು ಸ್ಟಿಕ್ಕರನ್ನು ಕೆ ಎಸ್ ಆರ್ ಟಿಸಿ ಸಂಚಾರ ನಿಯಂತ್ರಣ ಅಧಿಕಾರಿ ಅಬ್ಬಾಸ್ ಬಿಡಗಡೆ ಗೊಳಿಸಿದರು. ರೋಟರಿಯ ಅಂಗನವಾಡಿ ಅಭಿವೃದ್ದಿ ಜಿಲ್ಲಾ ಯೋಜನೆಯ ಚಯರ್ ಮೇನ್ ಸಂತೋಷ್ ಕುಮಾರ್ ಶೆಟ್ಟಿ, ರೋಟರಿ ವಲಯ ಸೇನಾನಿ ರೊ. ನವೀನ್ ಚಂದ್ರ ನಾಯ್ಕ್ ರೋಟರಿಯ ರಸ್ತೆ ಸುರಕ್ಷತಾ ಯೋಜನೆಯ ಜಿಲ್ಲಾ ಚಯರ್ ಮೇನ್ ಡಾ. ಹರ್ಷಕುಮಾರ್ ರೈ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನಿಕಟಪೂರ್ವ ಅಧ್ಯಕ್ಷರಾದ ರೊ. ರಫೀಕ್ ದರ್ಭೆ, ಕ್ಲಬ್ ನ ಸಮುದಾಯ ಅಭಿವೃದ್ದಿ ನಿರ್ದೇಶಕಿ ನವ್ಯಶ್ರೀ ನಾಯ್ಕ್, ಸೆಲ್ ಝೋನ್ ಮಾಲಕ ಜಯಪ್ರಕಾಶ್ ಅಮೈ, ಪ್ರವೀಣ್ ಅಮೈ, ಪುತ್ತೂರ ಮುತ್ತು ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ಶರಣ್ ಮತ್ತು ವೇಣುಗೋಪಾಲ್ ಉಪಸ್ಥಿತರಿದ್ದರು.
ಪುತ್ತೂರ ಮುತ್ತು ಕಾರು ಚಾಲಕ ಮಾಲಕ ಸಂಘದ ಕಾರ್ಯದರ್ಶಿ ಸುರೇಂದ್ರ ವಂದಿಸಿದರು. ಕಾರು ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ಪ್ರವೀಣ್,ಕೋಶಾಧಿಕಾರಿ ಜಗದೀಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು ರೋಟರಿ ಕ್ಲಬ್ ಸೆಂಟ್ರಲ್ ನ ಸದಸ್ಯ ಲೊಕೇಶ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.