ಧಾರವಾಡ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಯೋಜನಾ ಕಚೇರಿಯಲ್ಲಿ ಕೋಟ್ಯಾಂತರ ನಗದು ಕಳ್ಳತನ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ಎಸ್‌ಕೆಡಿಆರ್‌ಡಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಕುಶಾಲಕುಮಾರ ಕೃಷ್ಣಾ ಸವಣೂರು (23), ನವಲಗುಂದದ ಕಳ್ಳಿಮಠ ಓಣಿಯ ಬಸವರಾಜ ಶೇಖಪ್ಪ ಬಾಬಜಿ (34), ಮಹಾಂತೇಶ ಲಕ್ಷ್ಮಣ ಹಿರಗಣ್ಣವರ (27) ಹಾಗೂ ನವಲಗುಂದದ ಜಿಲಾನಿ ಬವರಸಾಬ ಜಮಾದಾರ (25), ಪರಶುರಾಮ ಹನುಮಂತಪ್ಪ ನೀಲಪ್ಪಗೌಡ್ರ (34), ಭೋವಿ ಓಣಿಯ ರಂಗಪ್ಪ ನಾಗಪ್ಪ ಗುಡಾರದ (31), ಮಂಜುನಾಥ ಯಮನಪ್ಪ ಭೋವಿ(22), ಕುಂಬಾರ ಓಣಿಯ ಕಿರಣ ಶರಣಪ್ಪ ಕುಂಬಾರ,ಆರ್ಮಿ ಕಾಲನಿಯ ರಜಾಕ ಅಹ್ಮದ ಅಲ್ಲಾವುದ್ದೀನ ಮುಲ್ಲಾನವರ (31), ವಿದ್ಯಾರ್ಥಿ ಆಗಿರುವ ವಿರೇಶ ಸಿದ್ದಪ್ಪ ಚವಡಿ (20) ಬಂಧಿತ ಆರೋಪಿಗಳು.
ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾಪೂರದಲ್ಲಿ ಈ ಘಟನೆ ನಡೆದಿದ್ದು, ವಿಜಯದಶಮಿ ದಿನದಂದು ನಡೆದ ಈ ಪ್ರಕರಣವನ್ನು ಇದೀಗ ಪೊಲೀಸರು ಭೇದಿಸಲಾಗಿದ್ದು, ಆರೋಪಿಗಳಿಂದ 79,89,870 ರೂ. ನಗದು, ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಡಿಸೈರ್ ಕಾರು, ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೆEಲ್ ಸೇರಿದಂತೆ ಒಟ್ಟು 85,89,870 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ರೇಣುಕಾ ಸುಕುಮಾರ್ ಹೇಳಿದ್ದಾರೆ.
ಎಸ್‌ಕೆಡಿಆರ್‌ಪಿಡಿ ವತಿಯಿಂದ ದಿನನಿತ್ಯ ಸಂಗ್ರಹಿಸುತ್ತಿದ್ದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಲಾಗುತ್ತದೆ. ಆದರೆ ವಿಜಯದಶಮಿ ಪ್ರಯುಕ್ತ ರಜೆ ಹಿನ್ನಲೆಯಲ್ಲಿ ಕಚೇರಿಯಲ್ಲಿಯೇ 1,24,48,087 ರೂ. ನಗದು ಹಣವನ್ನು ಇರಿಸಲಾಗಿತ್ತು. ಕಚೇರಿಯ ಭದ್ರತಾ ಕೊಠಡಿಯ ಭದ್ರತಾ ಲಾಕರ್‌ಗಳಲ್ಲಿ ಇರಿಸಲಾಗಿದ್ದ ಈ ಹಣವನ್ನು ಆಯುಧಗಳಿಂದ ಮೀಟಿ ಅದರಲ್ಲಿದ್ದ ಹಣವನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅ.24 ರಂದು ದೂರು ದಾಖಲಾಗಿತ್ತು.