ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನ.13ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ವಸ್ತ್ರ ವಿತರಣೆ ಹಾಗೂ ಸಹಭೋಜನಾ ಕಾರ್ಯಕ್ರಮಕ್ಕೆ ಗ್ರಾಮ ಗ್ರಾಮಕ್ಕೆ ತೆರಳಿ ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಆಮಂತ್ರಣವನ್ನು ನೀಡಲಾಗುವುದು ಮತ್ತು ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ವಿನಂತಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದ್ದಾರೆ.
ಅಳಿಕೆ,ಕೇಪು, ಮಾನಿಲ, ಹಿರೆಬಂಡಾಡಿ, ಉಪ್ಪಿನಂಗಡಿ ರಾಮನಗರ ಮತ್ತು ಬಜತ್ತೂರು ಗ್ರಾಮಗಳಲ್ಲಿ ಈಗಾಗಲೇ ಟ್ರಸ್ಟ್ ಸಮಿತಿ ಸದಸ್ಯರ ಸಭೆಯನ್ನು ನಡೆಸಲಾಗಿದೆ. ಟ್ರಸ್ಟ್ ಕಾರ್ಯನಿರ್ವಹಿಸುತ್ತಿರುವ ಬಗೆಯನ್ನು ಗ್ರಾಮಸ್ಥರಿಗೆ ತಿಳಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ಟ್ರಸ್ಟ್ ವತಿಯಿಂದ ವಸ್ತ್ರದಾನ ಮತ್ತು ಅನ್ನದಾನವನ್ನು ಪ್ರತೀ ವರ್ಷ ದೀಪಾವಳಿಯಂದು ನಡೆಸಿಕೊಂಡು ಬರುತ್ತಿದ್ದು ಈ ವರ್ಷ 11ನೇ ವರ್ಷದ ಕಾರ್ಯಕ್ರಮವಾಗಿರುತ್ತದೆ ಎಂದು ಹೇಳಿದರು. ಗ್ರಾಮದ ಪ್ರತೀಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಟ್ರಸ್ಟ್‌ನಿಂದ ನಡೆಯುವ ಅನ್ನದಾನ ಮತ್ತು ವಸ್ತ್ರದಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಬಾರಿ 50 ಸಾವಿರಕ್ಕೂ ಮಿಕ್ಕಿ ಟ್ರಸ್ಟ್ ಫಲಾನುಭವಿಗಳು, ಶಾಸಕರ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಏರ್ಪಡಿಸಲಾಗಿದೆ ಎಂದು ಸುದೇಶ್ ಶೆಟ್ಟಿಯವರು ತಿಳಿಸಿದರು.
ವಾರದಲ್ಲಿ ಎಲ್ಲಾ ಗ್ರಾಮಗಳಿಗೂ ಟ್ರಸ್ಟ್ ಸಮಿತಿ ಭೇಟಿ ನೀಡಿ ಗ್ರಾಮಸ್ಥರಿಗೆ ಆಮಂತ್ರಣವನ್ನು ನೀಡಲಿದೆ ಎಂದು ಹೇಳಿದರು.
ಸಭೆಯಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಟ್ರಸ್ಟ್‌ನ ಪ್ರಮುಖರಾದ ನಿಹಾಲ್ ಶೆಟ್ಟಿ, ಮುರಳೀಧರ್ ರೈ ಮಠಂತಬೆಟ್ಟು, ನಿರಂಜನ್ ರೈ ಮಠಂತಬೆಟ್ಟು, ಸಾಮಾಜಿಕ ಜಾಲತಾಣದ ಮುಖ್ಯಸ್ಥರದಾದ ಕೃಷ್ಣಪ್ರಸಾದ್ ಭಟ್ ಬೊಳ್ತಾಯಿ, ಮಾಜಿ ಜಿಪಂ ಅಧ್ಯಕ್ಷ ಸೋಮನಾಥ್, ಉಪ್ಪಿನಂಗಡಿ ರಾಮನಗರದ ಬಿ ಎ ಹಮೀದ್ ಕರಾವಳಿ, ಫಾರೂಕ್, ಅಬ್ದುಲ್ ಮಜೀದ್, ಉಮೇಶ್, ಬಜತ್ತೂರು ವಲಯ ಅಧ್ಯಕ್ಷ ಅನಿತಾಕೇಶವ ಗೌಡ, ಬೂತ್ ಅಧ್ಯಕ್ಷ ಅಜೀದ್ ಬಾಳೆಹಿತ್ತು,ಗ್ರಾಪಂ ಸದಸ್ಯ ಪ್ರೆಸಿಲ್ಲಾ ಡಿಸೋಜಾ, ಬೂತ್ ಅಧ್ಯಕ್ಷ ಶ್ರೀಧರ ಕಾಂಚನ, ಎಸ್ ಟಿ ಘಟಕದ ಅಧ್ಯಕ್ಷ ಸಿದ್ದಪ್ಪ ನಾಯ್ಕ ಬೆದ್ರೋಡಿ, ಬೂತ್ ಅಧ್ಯಕ್ಷ ಉಮ್ಮರ್ ಕೆಮ್ಮಾರ, ವಿನೋದ್ ಬೆದ್ರೋಡಿ, ಸಂತೋಷ್ ಕುಮಾರ್ ಜೈನ್, ಶೇಖರ ಪೂಜಾರಿ ಶಿಬರ್ಲ ಮೊದಲಾದವರು ಉಪಸ್ಥಿತರಿದ್ದರು.