ಪುತ್ತೂರು: ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲ ಹಾಗೂ ಶ್ರೀ ಸರಸ್ವತಿ ಯುವತಿ ಮಂಡಲದ ಜಂಟಿ ಆಶ್ರಯದಲ್ಲಿ ಯುವಕ ಮಂಡಲದ ಸುವರ್ಣ ಮಹೋತ್ಸವ ಸಂಭ್ರಮ ‘ಪಡ್ನೂರು ಉತ್ಸವ’ ನ.4 ಶನಿವಾರ ಹಾಗೂ ನ.5 ಭಾನುವಾರ ಪಡ್ನೂರು ಶಾಲಾ ವಠಾರದ ಶ್ರೀ ಜನಾರ್ದನ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಶ್ರೀಧರ ಕುಂಜಾರು ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುವರ್ಣ ಮಹೋತ್ಸವದ ಅಂಗವಾಗಿ ನ.4 ರಂದು ಬೆಳಿಗ್ಗೆ 7ಕ್ಕೆ ಜನಾರ್ದನ ಸದನದಲ್ಲಿ ಗಣಪತಿ ಹೋಮ ನಡೆದು ಬಳಿಕ 9.30 ಕ್ಕೆ ನಡೆಯುವ ಉಚಿತ ವೈದ್ಯಕೀಯ ಶಿಬಿರವನ್ನು ಮುರ ಜಯಂತ್ ಕ್ಲಿನಿಕ್‍ನ ಡಾ.ಕೃಷ್ಣಪ್ರಸಾದ್ ಸರ್ಪಂಗಳ ಉದ್ಘಾಟಿಸುವರು. ಡಾ.ಎಂ.ಕೆ.ಪ್ರಸಾದ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ಸುರೇಶ್ ಪುತ್ತೂರಾಯ, ಡಾ.ಸಚಿನ್ ಶಂಕರ್ ಹಾರಕರೆ, ಬೇರಿಕೆ ಆದಿಶಕ್ತಿ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ಬೇರಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡ್ನೂರು ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಪಡ್ನೂರು, ನವೋದಯ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ, ಪಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಪುಳು, ಪಡ್ನೂರು ಸಿಎಚ್‍ಒ ಸೌಮ್ಯ, ಪಡ್ನೂರು ಶ್ರೀರಾಮ ಫ್ರೆಂಡ್ಸ್ ಅಧ್ಯಕ್ಷ ಯತೀಶ್ ಪಂಜಿಗುಡ್ಡೆ, ಯರ್ಮುಂಜಪಳ್ಳ ಗೆಳೆಯರ ಬಳಗದ ಅಧ್ಯಕ್ಷ ಕುಶಲ ಗೌಡ ಪಂಜಿಗುಡ್ಡೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಜೆ 5 ಕ್ಕೆ ಸ್ಥಳೀಯರಿಂದ ನೃತ್ಯ ಪ್ರದರ್ಶನಗೊಳ್ಳಲಿದೆ. ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿ ಜನಾರ್ದನ ಭಟ್ ಪಂಜಿಗುಡ್ಡೆ ಉದ್ಘಾಟಿಸುವರು. ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಜೋಯಿಸ ಯರ್ಮುಂಜಪಳ್ಳ ಅಧ್ಯಕ್ಷತೆ ವಹಿಸುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ ಮುಖ್ಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬೆಂಗಳೂರಿನ ಉದ್ಯಮಿ ಮಹೇಶ್, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್, ಕ್ರೀಡಾಧಿಕಾರಿ ರಾಮಕೃಷ್ಣ ಪಡುಮಲೆ, ಸಮರ್ಥ ನಿಧಿ ಲಿ.ನ ನವೀನ್ ಕುಮಾರ್, ಪಡ್ನೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸೀತಾರಾಮ ಬೇರಿಕೆ, ಮುಖ್ಯ ಶಿಕ್ಷಕಿ ಜೀವನರಶ್ಮಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 10 ರಿಂದ ಪೌರಾಣಿಕ ನಾಟಕ ‘ಕಲ್ಜಿಗದ ಕಾಳಿ ಮಂತ್ರದೇವತೆ’ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ನ.5 ರಂದು ಬೆಳಿಗ್ಗೆ 10.30 ಕ್ಕೆ ಆರಂಭಗೊಳ್ಳಲಿರುವ 58 ಕೆ.ಜಿ.ವಿಭಾಗದ ಮ್ಯಾಟ್ ಅಂಕಣ ಕಬಡ್ಡಿ ಪಂದ್ಯಾಟವನ್ನು ನಿವೃತ್ತ ಕ್ರೀಡಾಧಿಕಾರಿ ಮಾಧವ ಬಿ.ಕೆ.ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬನ್ನೂರು ಗ್ರಾಪಂ ಅಧ್ಯಕ್ಷೆ ಸ್ಮಿತಾ, ಉಪಾಧ್ಯಕ್ಷ ಶೀನಪ್ಪ ಕುಲಾಲ್, ಮಾಜಿ ಅಧ್ಯಕ್ಷೆ ರಮಣಿ ಡಿ.ಗಾಣಿಗ, ಸದಸ್ಯರಾದ ಗಿರಿಧರ ಪಂಜಿಗುಡ್ಡೆ, ವಿಮಲ, ಶ್ರೀನಿವಾಸ ಪೆರ್ವೋಡಿ, ಗೀತಾ, ಗಣೇಶ್ ಪಳ್ಳ, ಜನಾರ್ದನ ಯುವಕ ಮಂಡಲದ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಮುವಪ್ಪು, ಹಿರಿಯ ಕಬಡ್ಡಿ ಆಟಗಾರರಾದ ಮಾಂಜು ಮುಂಡಾಜೆ, ಗಿರಿಯಪ್ಪ ರೆಂಜಾಳ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸಂಜೆ 7 ಕ್ಕೆ ನಡೆಯುವ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭವನ್ನು ಮದಗ ಕುಂಜಾರು ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟ್ರಮಣ ಭಟ್ ಹಾರಕರೆ ಉದ್ಘಾಟಿಸಲಿದ್ದು,. ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಗೌಡ ಪಟ್ಟೆ ಅಧ್ಯಕ್ಷತೆ ವಹಿಸುವರು. ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮುಖ್ಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಮುಂಬಯಿ ವೆಲ್‍ಫೇರ್ ಅಸೋಸಿಯೇಶನ್ ವಸಂತ ಮುಂಬಯಿ, ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಮಂಗಳೂರು ವಿವಿ ಕಬಡ್ಡಿ ಆಟಗಾರ ಕಿಶೋರ್ ಬೊಟ್ಯಾಡಿ, ವಿವೇಕಾನಂದ ಕಾಲೇಜು ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ., ಕಸ್ಟಮ್ಸ್ ಅಧಿಕಾರಿ ರಮೇಶ್ಚಂದ್ರ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಶಿವರಾಮ ಯೇನೆಕಲ್, ಎಪಿಎಂಸಿ ಮಾಜಿ ಸದಸ್ಯೆ ತ್ರಿವೇಣಿ ಪೆರ್ವೋಡಿ, ಶ್ರೀ ಸರಸ್ವತಿ ಯುವತಿ ಮಂಡಲದ ಗೌರವಾಧ್ಯಕ್ಷೆ ಸರೋಜಾ ಜೆ.ರಾವ್ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 13 ಮಂದಿಯನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ರಾತ್ರಿ 9.30 ಕ್ಕೆ ಅನ್ನಸಂತರ್ಪಣೆ ನಡೆದ ಬಳಿಕ ಕೇರಳ ಹಾಗೂ ಕರ್ನಾಟಕದ ಖ್ಯಾತ ಗಾಯಕರನ್ನೊಳಗೊಂಡ ಸಂಗೀತ ಮನೋರಂಜನೆ ‘ಪಡ್ನೂರು ಮ್ಯೂಸಿಕಲ್ ನೈಟ್’ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ವಿಶ್ವನಾಥ ಗೌಡ ಪಟ್ಟೆ, ಬಾಲಕೃಷ್ಣ ಜೋಯಿಸ ಯರ್ಮುಂಜ, ಉಪಾಧ್ಯಕ್ಷ ರಮೇಶ್ ರೆಂಜಾಳ, ಸ್ವಾಗತ ಸಮತಿ ಸಂಚಾಲಕ ಶ್ರೀಧರ ಪಂಜಿಗುಡ್ಡೆ, ಜಗದೀಶ ಆಟಿಕ್ಕು ಉಪಸ್ಥಿತರಿದ್ದರು.