ಹಿರಿಯಡ್ಕದ ಸಂತೋಷ್ ನೇಣು ಬಿಗಿದು ಆತ್ಮಹತ್ಯೆ

ಹಿರಿಯಡ್ಕ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.

ಹರಿಖಂಡಿಗೆಯ ಸಂತೋಷ್ (38) ಈ ಕೃತ್ಯ ಎಸಗಿದವರು.

ಸರಿಯಾದ ಕೆಲಸ ಇಲ್ಲದೆ ಮಾಡಿದ ಸಾಲ ಮರುಪಾವತಿಸಲು ಆಗದ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ಮನೆಯ ಬಾವಿಯ ರಾಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಈ ಕುರಿತು ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top