ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಕೇಂದ್ರದ ಅನುಮತಿ | ಟೆಂಡರ್ ಕರೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ

ಮಂಗಳೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ಧಾರಿ ಚತುಷ್ಪತ ಕಾಮಗಾರಿಗೆ ಕೇಂದ್ರದ ಅನುಮತಿ, ಡಿ.ಪಿ.ಆರ್ ಹಾಗೂ ಸಾಧ್ಯತಾ ವರದಿ ತಯಾರಿಸಲು ಟೆಂಡರ್ ಕರೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಟೆಂಡರ್ ಕರೆದಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ಬಹು ನಿರೀಕ್ಷಿತ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ (ಮಾಣಿ-ಮೈಸೂರು-ಬೆಂಗಳೂರು ವಿಭಾಗ) 0.00 ಕಿ.ಮೀ. ನಿಂದ 71.60 ವರೆಗಿನ ರಸ್ತೆಯ ಚತುಷ್ಪಥ ಕಾಮಗಾರಿಗೆ ಯೋಜನಾ ವರದಿ (ಡಿಪಿಆರ್), ಕಾರ್ಯಸಾಧ್ಯತೆಯ ಅಧ್ಯಯನ, ಸಮೀಕ್ಷೆ ಮತ್ತು ಭೂ ಯೋಜನೆಯನ್ನು ಸಿದ್ಧಪಡಿಸಲು ಅರ್ಹ ಸಲಹೆಗಾರರಿಂದ ಟೆಂಡರ್ ಆಹ್ವಾನಿಸಿದೆ.

ರಾಷ್ಟ್ರೀಯ ಹೆದ್ದಾರಿ – 169ರಲ್ಲಿ ಸಾಣೂರುನಿಂದ ಬಿಕರ್ನಕಟ್ಟೆವರೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿ –75 ಬಿಸಿರೋಡ್ ನಿಂದ–ಅಡ್ಡಹೊಳೆ ವರೆಗಿನ ರಸ್ತೆಗಳ ಮೇಲ್ದರ್ಜೆ ಕಾಮಗಾರಿಗಳು ನಡೆಯುತ್ತಿರುವಾಗಲೇ ಇನ್ನೊಂದು ಪ್ರಮುಖ ಹೆದ್ದಾರಿಯೂ ಮೇಲ್ದರ್ಜೆಗೇರುತ್ತಿರುವುದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.































 
 

ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top