ಪುತ್ತೂರು: ನಾಳೆ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 10 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು.

ಸನ್ಮಾನಿತರ ಆಯ್ಕೆ ಪ್ರಕ್ರಿಯೆ ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ 5 ಮಂದಿಯ ಆಯ್ಕೆ ಸಮಿತಿಯಿಂದ ಈಗಾಗಲೇ ನಡೆದಿದೆ.
ಹಿರಿಯ ಪ್ರಸೂತಿ ತಜ್ಞ ಡಾ.ಸುಬ್ರಾಯ ಭಟ್ (ವೈದ್ಯಕೀಯ), ಎ.ಪಿ.ನಾರಾಯಣ ಮರಿಕೆ (ಕೃಷಿ), ನಿರ್ಮಲಾ ಸುರತ್ಕಲ್ (ಸಾಹಿತ್ಯ), ನಾರಾಯಣ ಕೆ. (ಶಿಕ್ಷಣ), ದಯಾನಂದ ರೈ ಕೋರ್ಮಂಡ (ಕ್ರೀಡೆ), ಸುಂದರ ರೈ ಮಂದಾರ (ರಂಗಭೂಮಿ), ರೆ.ವಿಜಯ ಹಾರ್ವಿನ್ (ಶಿಕ್ಷಣ ಸಮನ್ವಯ), ಡಾ.ಅಜಯ್ (ಸಮಾಜ ಸೇವೆ), ನಾರಾಯಣ ಕುಂಬ್ರ (ಸಾಹಿತ್ಯ ಸಂಘಟನೆ), ಸಿದ್ದಿಕ್ ನಿರಾಜೆ (ಪತ್ರಿಕೋದ್ಯಮ) ಅವರನ್ನು ಆಯ್ಕೆ ಮಾಡಲಾಗಿದೆ.