ಮಂಗಳೂರು: ರಾಷ್ಟ್ರೀಯ ಹೆದ್ದಾರಿ 67ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರೊಂದು ಇಂದು ಪತ್ತೆಯಾಗಿದ್ದು, ಕಾರು ನಿಲ್ಲಿಸಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಕಾರನ್ನು ಪರಿಶೀಲಿಸಿದಾಗ ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಯೊಬ್ಬರ ಕೆಲವು ಗುರುತಿನ ಕಾರ್ಡ್ಗಳು ಕಂಡು ಬಂದಿವೆ. ಅಲ್ಲದೆ ಕಾರಿನ ಕೀ ಕೂಡಾ ಕಾರಿನಲ್ಲೇ ಪತ್ತೆಯಾಗಿದ್ದು, ಏನಾಗಿರಬಹುದು ಎಂಬ ಮಾಹಿತಿ ತಿಳಿದು ಬಂದಿಲ್ಲ.
ಕಾರಿನಲ್ಲಿ ಕಂಡು ಬಂದ ಗುರುತಿನ ಚೀಟಿಯ ಆಧಾರದ ಮೇಲೆ ಆ ವ್ಯಕ್ತಿಯ ಮನೆಯವರನ್ನು ಸಂಪರ್ಕಿಸಿ ವಿಷಯ ತಿಳಿಸಲಾಗಿದೆ. ಮನೆ ಮಂದಿ ಬಂದ ಬಳಿಕ ವಾಸ್ತವಾಂಶ ತಿಳಿಯಬಹುದಾಗಿದೆ ಎಂದು ಕಂಕನಾಡಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.