ಮಂಗಳೂರು: ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದ ವತಿಯಿಂದ ನವರಾತ್ರಿಯಂದು ನಡೆದ ಭವತಿ ಭಿಕ್ಷಾಂದೆಹೀ ಮೂಲಕ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಲಾಯಿತು.

ಕುಪ್ಪೆಮದವು ಶ್ರೀ ದುರ್ಗೆಶ್ವರಿ ದೇವಸ್ಥಾನನದಲ್ಲಿ ಸಹಾಯಧನವನ್ನು ದೇರೆಬೈಲ್ ಕೊಂಚಾಡಿ ನಿವಾಸಿ ಅನುಪಮಾ ಅವರ 2 ತಿಂಗಳ ನವಜಾತ ಶಿಶುವಿನ ಚಿಕಿತ್ಸೆಗೆ 32,057, ಕುಪ್ಪೆಪದವು ನಿವಾಸಿ ಮೋಹನ್ ಚಿಕಿತ್ಸೆಗೆ 10,500. ಮೂಡಬಿದಿರೆ ಅಲಂಗಾರು ನಿವಾಸಿ ಸಿಂಚನಳ ಚಿಕಿತ್ಸೆಗೆ 20,100, ಹಾಗೂ ಕುಪ್ಪೆಪದವು ಪರಿಸರದ ಬಡ ಕುಟುಂಬದ ಹೆಣ್ಣು ಮಗಳ ಮದುವೆಗೆ 10,500 ಹೀಗೆ ಒಟ್ಟು 4 ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು

ಈ ಸಂದರ್ಭದಲ್ಲಿ ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕ ಸರ್ವ ಕಾರ್ಯಕರ್ತರು ಉಪಸ್ಥಿತರಿದ್ದರು.