ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವತಿಯಿಂದ ಸಿಬ್ಬಂದಿಗಳ ಸಮ್ಮಿಲನ-ಮಾಹಿತಿ ಕಾರ್ಯಾಗಾರ ಬಲ್ನಾಡು ಗ್ರಾಮದ ಉಜಿರುಪಾದೆ ಬೈಲಾಡಿ ನಿವಾಸದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಹಾಗೂ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಮಾತನಾಡಿ, ಸಿಬ್ಬಂದಿಗಳು ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿ, ಸಂಘ ಬೆಳೆದು ಬಂದ ರೀತಿಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಲ್ನಾಡು ಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ, ಬೈಲಾಡಿ ಕುಟುಂಬದ ಯಜಮಾನ ದೇವಪ್ಪ ಗೌಡ ಹಾಗೂ ತರಬೇತಿ ನೀಡಿದ ಸೀತಾರಾಮ ಕೇವಳ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸಂಜೀವ ಗೌಡ ಕೆ., ಸುದರ್ಶನ ಕೋಡಿಂಬಾಳ, ಪ್ರವೀಣ್ ಕುಂಟ್ಯಾನ, ಲೋಕೇಶ್ ಚಾಕೋಟೆ, ಸುಪ್ರಿತಾ ರವಿಚಂದ್ರ, ತೇಜಸ್ವಿನಿ ಶೇಖರ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ತೆಂಕಿಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ನಿರ್ದೇಶಕರಾದ ಚಂದ್ರಶೇಖರ ಬ್ರಂತೋಡು, ಶಾಂತಪ್ಪ ಗೌಡ ಪಿಜಕ್ಕಳ, ನಾಗೇಶ್ ನಳಿಯಾರು, ನಾರಾಯಣ ಅರ್ವರ, ಸಾವಿತ್ರಿ ಆರಿಕೆ, ವಿಜಯ ಕೇಶವ ಗೌಡ, ಒಕ್ಕಲಿಗ ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಟಿ. ಗೌಡ, ಪ್ರಮುಖರಾದ ಸುಂದರ ಗೌಡ ನಡುಬೈಲು, ರವಿ ಮುಂಗ್ಲಿಮನೆ, ಸೋಮಪ್ಪ ಬಡಾವು, ಸೀತಾರಾಮ ಪೆರಿಯತ್ತೋಡಿ, ಕಾರ್ಯದರ್ಶಿ ವಾರಿಜಾ ಬೆಳಿಯಪ್ಪ ಗೌಡ, ಉಮಾನಾಥ್ ಬೈಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಪ್ರವೀಣ್ ಕುಂಟ್ಯಾನ ವಂದಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೊಳಂತಿಮುಗೇರು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾರಾಣಿ ವಹಿಸಿದ್ದರು.