ಹೆರಿಗೆ ವೇಳೆ ಮಾಡಾವಿನ ಮಹಿಳೆ ಮೃತ್ಯು

ಪುತ್ತೂರು: ಪುತ್ತೂರು ತಾಲೂಕಿನ ಮಾಡಾವಿನ ಎರಡು ಮಕ್ಕಳ ತಾಯಿಯೊಬ್ಬರು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ನ ಸದಸ್ಯೆ, ಪರ್ಲಡ್ಕ ಅಬ್ದುಲ್ ರಶೀದ್ ಹಾಜಿಯವರ ಪುತ್ರಿ ಮರಿಯಮ್ ರಮೀಝಾ ಮೃತಪಟ್ಟ ಮಹಿಳೆ

ಪುತ್ತೂರಿನ ಸಂಪ್ಯ ನಿವಾಸಿ ಮರ್ಹೂಮ್ ಅಬೂಬಕ್ಕರ್ ಪಟ್ಲಮೂಲೆ ಅವರ ಮಗ ಮಡಾವು ನಿವಾಸಿ ಗಲ್ಫ್ ನ ಒಮಾನ್‍ ನಲ್ಲಿ ಉದ್ಯೋಗಿಯಾಗಿರುವ ಮುಹಮ್ಮದ್ ರಫೀಖ್ ಅವರ ಪತ್ನಿಯಾಗಿದ್ದು, ಮೂರನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಹೆರಿಗೆ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top