ಪುತ್ತೂರು: ಕೇಂದ್ರ ಸರ್ಕಾರದ ‘ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಗ್ರಹಿಸಿದ ಮೃತ್ತಿಕೆಯ ಅಮೃತ ಕಲಶವನ್ನು ದೇಶಕ್ಕಾಗಿ ಹುತಾತ್ಮರಾದವರ ಸ್ಮರಣಾರ್ಥ ದೆಹಲಿಯಲ್ಲಿ ನಿರ್ಮಾಣವಾಗಲಿರುವ ಅಮೃತ ವನಕ್ಕೆ ಸಮರ್ಪಿಸಲು ದೆಹಲಿಗೆ ಪ್ರಯಾಣಿಸಲಾಯಿತು.
ಪುತ್ತೂರು ಮಾಜಿ ಶಾಸಕ ಸಂಜೀವ ಮಠದೂರು ದೆಹಲಿಗೆ ತೆರಳಲಿರುವವರನ್ನು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಸ್ಥಿತರಿದ್ದರು.
ಅಭಿಯಾನ ಸಂಚಾಲಕ, ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಹರೀಶ್ ಬಿಜತ್ರೆ, ಪುತ್ತೂರು ಗ್ರಾಮಾಂತರ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ಸುನೀಲ್ ದಡ್ದು ಒಟ್ಟು 45 ಪುಣ್ಯ ಸ್ಥಳ ದೈವಸ್ಥಾನ ಹಾಗೂ ದೇವಸ್ಥಾನದಿಂದ ಮೃತಿಕೆಯನ್ನು ಸಂಗ್ರಹಿಸಿದ ಅಮೃತ ಕಲಶವನ್ನು ದೆಹಲಿಯ ಕರ್ತವ್ಯ ಪಥದಲ್ಲಿ ದೇಶಕ್ಕಾಗಿ ಹುತಾತ್ಮರಾದವರ ಸ್ಮರಣರ್ಥ ನಿರ್ಮಾಣ ವಾಗಲಿರುವ ಅಮೃತ ವನಕ್ಕೆ ಸಮರ್ಪಿಸಲು ದೆಹಲಿಗೆ ಪ್ರಯಾಣಿಸಿದ್ದಾರೆ