ಪುತ್ತೂರು: ಅಶ್ವಿಜ ಮಾಸವನ್ನು ಹಬ್ಬಗಳ ಮಾಸ ಎಂದು ಕರೆಯಲಾಗುತ್ತಿದ್ದು, ಜ್ಯೋತಿಷ್ಯ ಮೂಲಗಳ ಪ್ರಕಾರ ಇಂದು ನಡೆಯುವ ಚಂದ್ರ ಗ್ರಹಣ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪ್ರಭಾವ ಬೀರಲಿದೆ.
ಗ್ರಹಣದ ಅವಧಿ ಮಧ್ಯರಾತ್ರಿ 1.04 ರಿಂದ 2.24 ವರಗೆ ಇರಲಿದೆ. ಹಿಂದೂ ಧರ್ಮದ ನಂಬಿಕೆ ಪ್ರಕಾರ ಗ್ರಹಣದ 9 ಗಂಟೆ ಮೊದಲು ಚಂದ್ರಗ್ರಹಣದ ಸೂತಕ ಅವಧಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಗರ್ಭಿಣಿಯರು ಹೊರಗಡೆ ಹೋಗುವುದನ್ನು ಕಡ್ಡಾಯವಾಗಿ ತಪ್ಪಿಸುವ ಮೂಲಕ ವಿಶೇಷ ಕಾಳಜಿ ವಹಿಸಬೇಕು. ಗ್ರಹಣದ ಸಂದರ್ಭದಲ್ಲಿ ಪ್ರಯಾಣ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ.
ಇಂದು ಮಕ್ಕಳು, ವೃದ್ಧರು, ಆಶಕ್ತರು ಹಾಗೂ ಅನಾರೋಗ್ಯಕ್ಕೆ ಒಳಗಾದವರು ಸೂರ್ಯಾಸ್ತದ ವರೆಗೆ ಆಹಾರ ಸೇವನೆ ಮಾಡಬಹುದು.
ಗ್ರಹಣಕ್ಕೆ ಸಂಬಂಧಿಸಿದಂತೆ ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾತ್ರಿ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ದಿನದಂತೆ 7.30 ಕ್ಕೆ ಪೂಜೆ ನಡೆಯಲಿದೆ. ಗ್ರಹಣ ಆರಂಭಕ್ಕೆ ಆರು ಗಂಟೆ ಅಂತರ ಇರುವುದರಿಂದ ಪೂಜೆಯಲ್ಲಿ ಬದಲಾವಣೆ ಇಲ್ಲ. ಗ್ರಹಣದ ಮರುದಿನ ಅಂದರೆ ನಾಳೆ ಗ್ರಹಣ ದೋಷ ಪರಿಹಾರಕ್ಕೆ ಜಪ ಮಾಡಿ ಎಳ್ಳೆಣ್ಣೆಯನ್ನು 56 ರೂ. ಕಾಣಿಕೆಯೊಂದಿಗೆ ಶ್ರೀ ದೇವಸ್ಥಾನಕ್ಕೆ ಒಪ್ಪಿಸಬಹುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ.