ಏಳ್ಮುಡಿ ಸೇತುವೆ ದಾಟಲು ಏಳು ಮುಡಿ ಹೊತ್ತ ಅನುಭವ!! | ಪಾದಚಾರಿಗಳಿಗೆ ಸಮಸ್ಯೆ ತಂದೊಡ್ಡುತ್ತಿವೆ ಬೆಳೆದು ನಿಂತ ಗಿಡಗಂಟಿ!!

ಪುತ್ತೂರು: ನಗರದ ಮಧ್ಯಭಾಗದಲ್ಲಿ ಅದೂ ಮುಖ್ಯರಸ್ತೆಯಲ್ಲಿರುವ ಸೇತುವೆಯೊಂದರ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದ ಪರಿಣಾಮ ಸಾರ್ವಜನಿಕರಿಗೆ ನಡೆದಾಡಲೂ ಕಷ್ಟ ಪಡುವಂತಾಗಿದೆ.

ಬಸ್ ನಿಲ್ದಾಣ – ದರ್ಬೆ ಸಂಪರ್ಕ ರಸ್ತೆಯ ಮಧ್ಯ ಭಾಗದ ಏಳ್ಮುಡಿ ಸೇತುವೆಯ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಪಾದಚಾರಿಗಳು ನಡೆದಾಡಲು ಹರಸಾಹಸ ಪಡುತ್ತಿದ್ದಾರೆ. ಹೇಳಿಕೇಳಿ ಈ ಸೇತುವೆ ಮೊದಲೇ ಇಕ್ಕಟಾದ ಸೇತುವೆ. ವಾಹನಗಳು ಅತ್ತಿಂದಿತ್ತ ಚಲಿಸುವ ಸಂದರ್ಭ ಪಾದಚಾರಿಗಳು ಸೇತುವೆಯ ಬದಿಗಳಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಗಿಡಗಂಟಿಗಳು ಬೆಳೆದ ಪರಿಣಾಮ ಸಮಸ್ಯೆ ಉಂಟಾಗಿದೆ.

ತಕ್ಷಣ ನಗರಸಭೆ ಎಚ್ಚೆತ್ತುಕೊಂಡು ಗಿಡಗಂಟಿಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ನಡೆದಾಡಲು ಸುಗಮವಾಗುವಂತೆ ಮಾಡಬೇಕಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top