ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸುಳ್ಯದ ಯುವಕ ಆತ್ಮಹತ್ಯೆ

ಸುಳ್ಯ : ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಶುಕ್ರವಾರ ನಡೆದಿದೆ.

ಸುಳ್ಯ ಗುತ್ತಿಗಾರಿನ ಆಚಳ್ಳಿಯ ಸಿರಿಯಾಕ್ ಮ್ಯಾಥ್ಯೂ ಎಂಬವರ ಮಗ ಸೈಬಿನ್ ಈ ಕೃತ್ಯ ಎಸಗಿದವರು.

ನಿನ್ನೆ ಗುತ್ತಿಗಾರು ಪೇಟೆಗೆ ಸೈಬಿನ್  ಆಗಮಿಸಿದ್ದು, ಎಲ್ಲರ ಜೊತೆ ಸಂತೋಷದಿಂದ ಮಾತನಾಡಿದ್ದ ಎನ್ನಲಾಗಿದೆ. ಸೈಬಿನ್ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಅವರ ಹಳೆ ಮನೆಯ ಪಕ್ಕ ಜಮಾಯಿಸಿದ್ದರು. ಈ ಸಂದರ್ಭ  ಪೊಲೀಸರು ಆಗಮಿಸಿ ಜನರನ್ನು ಚದುರಿಸಿದರು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top