ಅಡ್ಯನಡ್ಕ : ಶ್ರೀ ದುರ್ಗಾಪರಮೇಶ್ವರಿ ಮತ್ತು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಶಾರದೋತ್ಸವದ 34ನೇ ವರ್ಷದ ಉತ್ಸವದಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ವತಿಯಿಂದ ಭಕ್ತಿಗಾನ ರಸಮಂಜರಿ ನಡೆಯಿತು.
ಸಂಸ್ಥೆಯ ಸವಿತಾ ಕೋಡಂದೂರ್ ಮತ್ತು ವಿದ್ಯಾರ್ಥಿಗಳಿಂದ ನಡೆದ ಭಕ್ತಿ ಗಾನ ರಸಮಂಜರಿ ಕಾರ್ಯಕ್ರಮವನ್ನು ವೇ.ಮು ರಾಮಕೃಷ್ಣ ಭಟ್ ನೀರಮೂಲೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ದಾಸರ ಪದಗಳನ್ನು ಹಾಡಿ ಮನಸೂರೆಗೊಂಡ ಕಾರ್ಯಕ್ರಮವಾಗಿ ಸಂಗೀತದ ಝೇಂಕಾರ ಮೂಡಿಬಂತು. ತಾನು ಬೆಳೆಯುವುದಲ್ಲದೆ ಇತರ ಕಲಾವಿದರನ್ನು ಬೆಳೆಸುವ ಗುಣ ಅವರದಾಗಿದ್ದು, ಅವರ ಕಲಾ ಜೀವನದ ಪಯಣ ಇದೇ ರೀತಿ ಸಾಗಲಿ ಎಂದು ಶುಭ ಹಾರೈಸಿದರು.
ಪಕ್ಕ ವಾದ್ಯದಲ್ಲಿ ಕೀಬೋರ್ಡ್ ಅಮ್ಮು ಮಾಸ್ಟರ್ ಕಾಸರಗೋಡು, ತಬಲ ಸ್ಕಂದಕುಮಾರ್ ಪುತ್ತೂರು, ರಿದಂ ಪ್ಯಾಡ್ ಸಾಯಿ ನಾರಾಯಣ ಕಲ್ಮಡ್ಕ ಸಾಥ್ ನೀಡಿದರು.
ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಕುಲಾಲ್ ಪಂಜಿಕಲ್ಲು, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವ, ರಘುರಾಮ ಶಾಸ್ತ್ರಿ ಕೊಡಂದೂರ್, ಸಿಂಚನ ಲಕ್ಷ್ಮಿ ಕೊಡಂದೂರು ಮುಂತಾದವರು ಉಪಸ್ಥಿತರಿದ್ದರು.
ಪದ್ಮನಾಭ ಚಾರ್ವಾಕ ಕಾರ್ಯಕ್ರಮ ನಿರೂಪಿಸಿದರು.