ನಾರ್ಯ ಪರಿಸರದಲ್ಲಿ ಚಿರತೆ ಓಡಾಟ : ಸ್ಥಳೀಯರಲ್ಲಿ ಭೀತಿ

ಉಜಿರೆ : ಉಜಿರೆ ಸಮೀಪದ ಕನ್ಯಾಡಿ-2ಗ್ರಾಮದ ನಾರ್ಯ ಮೂರು ಮಾರ್ಗ ಎಂಬಲ್ಲಿ ಬುಧವಾರ ರಾತ್ರಿ ಚಿರತೆ ಕಂಡು ಬಂದಿದ್ದು, ಸ್ಥಳೀಯ ಜನತೆ ಭಯಭೀತರಾಗಿದ್ದಾರೆ.

ರಾತ್ರಿ ಸಮಯ ಈ ರಸ್ತೆಯಲ್ಲಿ ಪಾಣೇಲಿನ ವ್ಯಕ್ತಿಗೆ ಚಿರತೆ ಕಂಡು ಬಂದಿದೆ ಎಂದು ಹೇಳಲಾಗಿದ್ದು, ಚಿರತೆಯ ಚಿತ್ರ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾರ್ಯ ಪರಿಸರದಲ್ಲಿ ಹಲವು ಮನೆಗಳು ಇದ್ದು ಇಲ್ಲಿನ ಮಂದಿ ಚಿರತೆ ಓಡಾಟದಿಂದ ಭೀತರಾಗಿದ್ದಾರೆ. 

ಈ ಭಾಗದಲ್ಲಿ ಧರ್ಮಸ್ಥಳ ಮೀಸಲು ಅರಣ್ಯ ಹಾಗೂ ಬೆಳಾಲು ವ್ಯಾಪ್ತಿಯ ದಡಂತಮಲೆ ಅರಣ್ಯ ಪ್ರದೇಶ ಇದ್ದು ಸಾವಿರ ಎಕರೆಗೂ ಹೆಚ್ಚಿನ ಅರಣ್ಯವಿದೆ. ಬುಧವಾರ ರಾತ್ರಿ ಚಿರತೆ ಕಂಡು ಬಂದ ವಿಚಾರ ಖಚಿತಗೊಂಡಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top