ಪುತ್ತೂರು: ನವರಾತ್ರಿ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಏರ್ಪಡಿಸಿದ್ದ ಸರಸ್ವತಿ ಗೀತ ಗಾಯನ ಸ್ಪರ್ಧೆಯ ಫಲಿತಾಂಶವನ್ನು ಇಲ್ಲಿ ಪ್ರಕಟಿಸಲಾಗಿದೆ.
ಸಾರ್ವಜನಿಕ ವಿಭಾಗದಲ್ಲಿ ಸುಮಾ ಕೋಟೆ ಪ್ರಥಮ, ಸಾನ್ವಿ ಕಜೆ ದ್ವಿತೀಯ, ಶಿವಪ್ರಿಯಾ ಪಿ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಾಲಾ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಸುಪ್ರಜಾ ರಾವ್ ಪ್ರಥಮ, ಜನನಿ ದ್ವಿತೀಯ ಸ್ಥಾನ ಹಾಗೂ ಆರಾಧ್ಯ ಸಿ.ಯು. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ತೀರ್ಪುಗಾರರಾಗಿ ಸಂಗೀತಾ ಶಿಕ್ಷಕಿಯರಾದ ಪವಿತ್ರಾ ರೂಪೇಶ್, ಪೂರ್ಣಿಮಾ ದಿನೇಶ್ ಅಂಬೆಕಲ್ಲು ಸಹಕರಿಸಿದರು.
























