ಪುತ್ತೂರು: ತುಳುನಾಡ ಹುಲಿಕುಣಿತ ಜನಪದೀಯ ನಂಬಿಕೆಯೊಂದಿಗೆ ಹರಕೆ ರೂಪದಲ್ಲಿರುವ ಒಂದು ಗೊಬ್ಬು. ತುಳುನಾಡಿನ ದೈವಕಲೆ, ಸಂಸ್ಕೃತಿಯ ಭಾಗವಾದ ಹುಲಿ ಕುಣಿತಕ್ಕೆ ರೂಪು, ನಡವಳಿಕೆ, ಚೌಕಟ್ಟು ನೀಡಿ ಪ್ರತಿಭೆಗಳನ್ನು ಗುರುತಿಸುವ ಕೆಲಸ ವಿಜಯ್ ಸಾಮ್ರಾಟ್ ನಿಂದ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾನುವಾರ ಪುತ್ತೂರು ವಿಜಯ್ ಸಾಮ್ರಾಟ್ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ ಪಿಲಿಗೊಬ್ಬು-2023 ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ,
ಹಿಂದೆ ಮನೆ ಮನೆಗಳಿಗೆ ತೆರಳಿ ಪ್ರದರ್ಶನ ನೀಡುತ್ತಿದ್ದ ತುಳುನಾಡ ತಾಯಿಯ ಭಾಗವಾದ ಹುಲಿ ಕುಣಿತವನ್ನು ಪ್ರಸ್ತುತ ಒಂದೇ ವೇದಿಕೆಯಲ್ಲಿ ಏರ್ಪಡಿಸುವ ಮೂಲಕ ತುಳುನಾಡಿನ ದೈವ ಕಲೆಯನ್ನು ಉಳಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ನಡೆಯುತ್ತಿದೆ ಎಂದ ಅವರು,
ವಿಜಯ ಸಾಮ್ರಾಟ್ ಇಂದು ತುಳು ಸಂಸ್ಕೃತಿಯ ಹುಲಿ ಕುಣಿತ ಸ್ಪರ್ಧೆಗೆ ಒಳ್ಳೆಯ ರಂಗು ನೀಡಿ ಕಾರ್ಯಕ್ರಮ ಆಯೋಜನೆ ಮಾಡಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಕೆಎಂ.ಪ್ರಸಾದ್ ಮಾತನಾಡಿ, ದುರ್ಗೆಯ ವಾಹನ ಹುಲಿ. ಅದರ ಸಂಕೇತವಾಗಿ ಇಂದು ಕಾರ್ಯಕ್ರಮ ಆಯೋಜನೆಯಾಗಿದೆ. ಇದರೊಂದಿಗೆ ಸಮಾಜದ ಬಡ ವರ್ಗಕ್ಕೆ ಸಹಾಯಹಸ್ತ ಚಾಚುವ ಕೆಲಸ ವಿಜಯ್ ಸಾಮ್ರಾಟ್ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಪಿ ಮುಖಂಡರಾದ ಬೂಡಿಯಾರ್ ರಾಧಾಕೃಷ್ಣ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ರಾಜೇಶ್ ಬನ್ನೂರು, ಪಿ.ಜಿ.ಜಗನ್ನಿವಾಸ ರಾವ್, ಸಾಜ ರಾಧಾಕೃಷ್ಣ ಆಳ್ವ, ಅಮಿತ್ ರಾಜ್ , ಉದ್ಯಮಿಗಳಾದ ಜಯಂತ ನಡುಬೈಲು, ಸೀತಾರಾಮ ರೈ ಕೆದಂಬಾಡಿಗುತ್ತು, ಹರ್ಷಕುಮಾರ್ ರೈ ಮಾಡಾವು, ದಯಾಕರ ಆಳ್ವ, ರವೀಂದ್ರ ರೈ ನುಳಿಯಾಲು, ಡಾ.ಸುರೇಶ್ ಪುತ್ತೂರಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ತುಳು ಚಿತ್ರನಟ ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ ಉಪಸ್ಥಿತರಿದ್ದರು.
ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಿಲಿಗೊಬ್ಬು ಸಮಿತಿ ಸಂಚಾಲಕ ನಾಗರಾಜ್ ನಡುವಡ್ಕ, ಉಪಾಧ್ಯಕ್ಷರಾದ ದೇವಿಪ್ರಸಾದ್ ಭಂಡಾರಿ, ಸಂದೀಪ್ ರೈ ನಂಜೆ, ಕಾರ್ಯದರ್ಶಿಗಳಾದ ಶರತ್ ಕುಮಾರ್ ಮಾಡಾವು, ಸುರೇಶ್ ಪಿಡಪಟ್ಲ, ಜತೆಕಾರ್ಯದರ್ಶಿ ಶಂಕರ್ ಭಟ್ ಈಶಾನ್ಯ, ಕೋಶಾಧಿಕಾರಿಗಳಾದ ರಾಜೇಶ್ ಕೆ. ಗೌಡ, ಅಶೋಕ್ ಅಡೂರು, ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ರೈ ವಿಟ್ಲ, ಉದಯ್ ಪಾಟಾಳಿ ಬೆಳ್ಳಾರೆ, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಸದಸ್ಯರು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಕ್ಷಾ ರೈ, ಯಕ್ಷಿತಾ ಪ್ರಾರ್ಥನೆ ಹಾಡಿದರು. ಗೌರವಾಧ್ಯಕ್ಷ ಸಹಜ್ ಜೆ.ರೈ ಬಳಜ್ಜ ಸ್ವಾಗತಿಸಿದರು. ಹೇಮಾ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾಗಿ ನವನೀತ್ ಶೆಟ್ಟಿ ಕದ್ರಿ, ತಾರನಾಥ ಶೆಟ್ಟಿ ಬೋಳೂರು ಸಹಕರಿಸಿದರು. ಜಿಲ್ಲೆಯ ಖ್ಯಾತ 10 ಹುಲಿಕುಣಿತ ತಂಡ ಪಾಲ್ಗೊಂಡಿದ್ದವು.