ಕರಾಮ ಡೇ ಟು ಡೇ ಶಾಪಿಂಗ್‍ ಸೆಂಟರ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ | ಇಬ್ಬರು ಮೃತ್ಯು

ದುಬೈ : ಕೊಲ್ಲಿ ರಾಷ್ಟ್ರ ದುಬೈ ಅಲ್ ಕರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಭಾರತೀಯರು ಸಾವನ್ನಪ್ಪಿದ್ದು, 8 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಕರಾಮ ‘ಡೇ ಟು ಡೇ’ ಶಾಪಿಂಗ್ ಸೆಂಟರ್ ಬಳಿಯ ಬಿನ್ಹೈದರ್ ಬಿಲ್ಡಿಂಗ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕೇರಳ ಮಲಪ್ಪುರಂ ಮೂಲದ ಯಾಕೂಬ್ ಅಬ್ದುಲ್ಲಾ ಮತ್ತು ತಲಶ್ಶೇರಿ ಟೆಂಪಲ್ ಗೇಟ್‌ನಲ್ಲಿರುವ ನಿಟ್ಟೂರು ಮನೆಯ ನಿದಿನ್ ದಾಸ್ ಸಾವನ್ನಪ್ಪಿದವರು.































 
 

ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ 8 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ನಿವಾಸದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ. ಕಣ್ಣೂರು ತಲಶ್ಶೇರಿ ಪುನ್ನೋಲ್‌ನ 2 ಜನರ ಸ್ಥಿತಿ ಚಿಂತಾಜನಕವಾಗಿದೆ. ಮೂರು ಕೊಠಡಿಯ ಫ್ಲಾಟ್‌ನಲ್ಲಿ 17 ಜನರು ವಾಸಿಸುತ್ತಿದ್ದರು. ರಾತ್ರಿ, ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯ ಕುರಿತು ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ಮೃತ ದೇಹಗಳನ್ನು ರಶೀದ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top