ಪುತ್ತೂರು: ತಾಲೂಕಿನ ನಾಲ್ಕು ಮಂದಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ಮೊತ್ತವನ್ನು ಪುತ್ತೂರು ಶಾಸಕರ ಕಚೇರಿಯಲ್ಲಿ ಶನಿವಾರ ಸಂಜೆ ವಿತರಿಸಲಾಯಿತು.
ತಾಲೂಕಿನ ಕೋಡಿಂಬಾಡಿ ಗ್ರಾಮದ ಮೋಹನ್ ಕಜೆ ಅವರಿಗೆ 20 ಸಾವಿರ ರೂ., ಬಜತ್ತೂರು ಗ್ರಾಮದ ಜಯರಾಮ ಎಂ. ಅವರಿಗೆ 30 ಸಾವಿರ ರೂ., ಕುಡಿಪ್ಪಾಡಿ ಗ್ರಾಮದ ಇಸ್ಮಾಯಿಲ್ ಅವರಿಗೆ 33,152 ಹಾಗೂ ಆರ್ಯಾಪು ಗ್ರಾಮದ ಹರೀಶ ಅವರಿಗೆ 24 ಸಾವಿರ ರೂ. ಪರಿಹಾರ ನಿಧಿಯನ್ನು ಶಾಸಕ ಅಶೋಕ್ ಕುಮಾರ್ ರೈ ವಿತರಿಸಿದರು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.