ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು ಕಂಬಳಕ್ಕೆ ಇನ್ನೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನುಮತಿ ಸಿಕ್ಕಿಲ್ಲ ಎಂದು ವರದಿಯಾಗಿದೆ.
ನವಂಬರ್ ಕೊನೆ ವಾರದಲ್ಲಿ ನಡೆಯಲುದ್ದೇಶಿಸಿರುವ ಬೆಂಗಳೂರು ಕಂಬಳಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕರೆ ಮುಹೂರ್ತವೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮುಹೂರ್ತಕ್ಕೆ ಆಗಮಿಸಿ, 1 ಕೋಟಿ ರೂ. ಅನುದಾನ ನೀಡುವ ಘೋಷಣೆ ಮಾಡಿದ್ದರು. ಇದರ ನಡುವೆ ಇದೀಗ ಅನುಮತಿ ವಿಚಾರ ವರದಿಯಾಗಿದೆ.
ಬೆಂಗಳೂರಿನಲ್ಲಿ ಕಂಬಳ ನಡೆಸುವುದಾದರೆ ಬಿಬಿಎಂಪಿಯ ಅನುಮತಿ ಕಡ್ಡಾಯ. ಕಾನೂನು ಪ್ರಕಾರ, ಬಿಬಿಎಂಪಿಯ ಅನುಮತಿ ಪಡೆದುಕೊಂಡು, ಕಂಬಳ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕಂಬಳ ಆಯೋಜಕರ ಮುಂದಿನ ನಡೆ ಹೇಗಿರಲಿದೆ ಎನ್ನುವುದೇ ಕುತೂಹಲದ ಸಂಗತಿ.
ನಮಗೆ ಯಾರೂ ಅರ್ಜಿ ಕೊಟ್ಟಿಲ್ಲ. ಅರ್ಜಿ ನೀಡಿದರೆ ಕಾನೂನು ಕ್ರಮ ನೋಡಿಕೊಂಡು, ಮುಂದುವರಿಯಲಾಗುವುದು.
ತುಷಾರ್ ಗಿರಿನಾಥ್, ಬಿಬಿಎಂಪಿ ಆಯುಕ್ತ