ಸುಬ್ರಹ್ಮಣ್ಯ: ಸರಕಾರಿ ಸೇವೆ ಸಹಿತಿ ಹಲವು ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲಿರುವ ‘ಪೂರ್ವಿ ಸಾಮಾನ್ಯ ಸೇವಾ ಕೇಂದ್ರ’ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಕಲ್ಲಾಜೆ ಸೇವಾ ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಎಲ್. ವೆಂಕಟೇಶ್ ಮಾತನಾಡಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಹಾಗೂ ಸಂಜೀವಿನಿ ಒಕ್ಕೂಟದ ಒಡಂಬಡಿಕೆಯಿಂದ ಸೇವೆ ಸಲ್ಲಿಸಲಿರುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಇದಾಗಿದೆ. ಮಹಿಳೆಯರು ಆರ್ಥಿಕವಾಗಿ ಸಬಲೀಕರಣರಾಗಬೇಕೆಂಬ ಉದ್ದೇಶದೊಂದಿಗೆ ಸೇವಾ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕ ರಂಗದಲ್ಲಿ ಅವರ ಸೇವೆ ಎಲ್ಲರಿಗೂ ಸುಲಭವಾಗಿ ಸಿಗುವಂತಾಗಲಿ ಎಂದು ಶುಭ ಹಾರೈಸಿದರು
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಜಾತ ಕಾಶಿ ಕಟ್ಟೆ, ಗ್ರಾಮ ಪಂಚಾಯಿತಿ ಪಿ. ಡಿ. ಓ . ಮೋನಪ್ಪ, ಪಂಚಾಯಿತಿ ಸದಸ್ಯರುಗಳು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಸುಳ್ಯ ಮಹಿಳಾ ಮಂಡಲದ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಪೂರ್ವಿ ಸೇವಾ ಕೇಂದ್ರದ ಮುಖ್ಯಸ್ಥೆ ತ್ರಿವೇಣಿ ದಾಮ್ಲೆ ಸ್ವಾಗತಿಸಿ, ಸೇವಾ ಕೇಂದ್ರದ ಉದ್ದೇಶಗಳನ್ನು ತಿಳಿಸಿದರು. ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಹೇಮಾವತಿ ವಂದಿಸಿದರು.
ಸುಬ್ರಹ್ಮಣ್ಯ ಆಸುಪಾಸಿನ ಎಲ್ಲಾ ಸಾರ್ವಜನಿಕರಿಗೆ ಉದ್ಯೋಗ ಸೇವೆ, ಪಾನ್ ಕಾರ್ಡ್, ಪೆನ್ಷನ್, ಕೌಶಲ್ಯ, ಬ್ಯಾಂಕಿಂಗ್ ಸೇವೆಗಳು, ಈ -ಶ್ರಮ, ಎಲ್ ಐ ಸಿ, ವಾಹನ ವಿಮೆ, ಮೊಬೈಲ್ ಹಾಗೂ ಡಿಟಿಎಚ್ ರಿಚಾರ್ಜ್, ಜೆರಾಕ್ಸ್, ಆರ್ ಟಿ ಸಿ, ರೇಷನ್ ಕಾರ್ಡ್, ಆಧಾರ್ ಕಾರ್ಡುಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲಾಗುವುದು ಎಂದು ಸೇವಾ ಕೇಂದ್ರದ ಮುಖ್ಯಸ್ಥೆ ತ್ರಿವೇಣಿ ದಾಮ್ಲೆ ತಿಳಿಸಿದ್ದಾರೆ.