ಸಮುದ್ರ ಬೀಚ್‌ನಲ್ಲಿ ಜೋಡಿ ಮೃತದೇಹ ಪತ್ತೆ!

ಮಂಗಳೂರು: ಇಲ್ಲಿನ ಪಣಂಬೂರು ಬೀಚ್‌ನಲ್ಲಿ ಬೆಂಗಳೂರಿನ ಜೋಡಿ ಶವ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.

ಮೃತರನ್ನು ಲಕ್ಷ್ಮಿ(40) ಮತ್ತು ಬೋರಲಿಂಗಯ್ಯ (45) ಎಂದು ಗುರುತ್ತಿಸಲಾಗಿದ್ದು, ಇವರಿಬ್ಬರೂ ಬೆಂಗಳೂರು ಮೂಲದವರು.

ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ. ಬುಧವಾರ ಬೆಂಗಳೂರಿನಿಂದ ಆಗಮಿಸಿದ್ದ ಈ ಜೋಡಿ, ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಪಣಂಬೂರಿಗೆ ಬಂದು ಸಮುದ್ರಕ್ಕೆ ಧುಮುಕಿದ್ದರು ಎನ್ನಲಾಗಿದೆ.































 
 

ಸಮುದ್ರಕ್ಕೆ ಹಾರುವ ಮುಂಚೆ ತಮ್ಮ ಮೊಬೈಲ್ ಮತ್ತಿತರ ಸೊತ್ತುಗಳನ್ನು ತೀರದಲ್ಲೇ ಬಿಟ್ಟಿದ್ದರಿಂದ ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಪಣಂಬೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top