ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯ ಪ್ರಯುಕ್ತ ಪಕ್ಷ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು.
ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿ, ದೇವಳದ ಒಳ ಭಾಗದಲ್ಲಿ ನವರಾತ್ರಿ ಪೂಜೆಯು ವಿದ್ಯುಕ್ತವಾಗಿ ನಡೆದಂತೆ ದೇವಿಯ ಪ್ರೀತ್ಯರ್ಥವಾಗಿ ಸಂಗೀತ, ಭಜನೆ, ಯಕ್ಷಗಾನ, ಪಾರಾಯಣ ಕಾರ್ಯಕ್ರಮಗಳು ನಡೆಯಲಿರುವುದು ಸಂಪ್ರದಾಯವಾಗಿದೆ ಎಂದು ತಿಳಿಸಿದರು.
ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಭುವನೇಶ. ಜಿ, ಭಜನಾ ಮಂಡಳಿಯ ಅಧ್ಯಕ್ಷ ಉಮೇಶ ಶೆಟ್ಟಿ ಸಂಬೊಳ್ಯ, ಕಲಾವಿದ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು.
ಬಳಿಕ ಯಕ್ಷರಾಧನಾ ಪ್ರತಿಷ್ಠಾನ ನಾಳ ವತಿಯಿಂದ ವಿಷ್ಣು ಮಹಿಮೆ ತಾಳಮದ್ದಳೆ ಜರಗಿತು. ಭಾಗವತರಾಗಿ ಸತೀಶ ಚಾರ್ಮಾಡಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ , ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಅರ್ಥಧಾರಿಗಳಾಗಿ ರಾಘವೇಂದ್ರ ಆಸ್ರಣ್ಣ (ತಮಾಸುರ) ಶಿವಾನಂದ ಭಂಡಾರಿ (ದೇವೇಂದ್ರ) ದಿವಾಕರ ಆಚಾರ್ಯ ಗೇರುಕಟ್ಟೆ (ಖ್ಯಾತಿ) ರಾಘವ. ಎಚ್ (ವಿಷ್ಣು) ಹರೀಶ ಆಚಾರ್ಯ ಬಾರ್ಯ (ಭೃಗು) ಭಾಗವಹಿಸಿದ್ದರು.
ಯಕ್ಷ ಆರಾಧನ ಪ್ರತಿಷ್ಠಾನದ ಸಂಚಾಲಕ ರಾಘವ. ಎಚ್ ಗೇರುಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.