ಮಂಗಳೂರು : ಕಾಮಗಾರಿ ನಡೆದ ಬಳಿಕ ಸ್ಥಳದಲ್ಲಿರುವ ಮೆಟೀರಿಯಲ್ ಪರಿಶೀಲನೆ ನಡೆಸಿ ವರದಿ ನೀಡಲು ಗುತ್ತಿಗೆದಾರರೊಬ್ಬರಿಂದ ಲಂಚ ಬೇಡಿಕೆ ಇಟ್ಟಿದ್ದ ಮಂಗಳೂರು ಲೋಕೋಪಯೋಗಿ ಸಹಾಯಕ ಕಾರ್ಯಪಾಲ ಇಂಜಿನಿಯರ್ ಕಚೇರಿಯ ಗುಣ ಭರವಸೆ ಉಪವಿಭಾಗದ ಕಿರಿಯ ಇಂಜಿನಿಯರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಿರಿಯ ಇಂಜಿನಿಯರ್ -2 ಅಗಿರುವ ರೋನಾಲ್ಡ್ ಲೋಬೋ ಲೋಕಾಯುಕ್ತ ಬಲೆಗೆ ಬಿದ್ದವರು.
ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಮಗಾರಿ ನಡೆಸಿದ ಬಳಿಕ ಸ್ಥಳದಲ್ಲಿದ್ದ ಮೆಟೀರಿಯಲ್ ಪರಿಶೀಲನೆಗೆ ಬೆಳ್ತಂಗಡಿಯ ಗುತ್ತಿಗೆದಾರರೊಬ್ಬರಿಂದ 20 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇಂದು ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಇದೀಗ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.