ಪುತ್ತೂರು: ಮಹಿಳೆಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಎಡಮಂಗಲ ಗ್ರಾಮದ ಕೇರ್ಪಡ ಎಂಬಲ್ಲಿ ಬುಧವಾರ ನಡೆದಿದೆ.
ಕೇರ್ಪಡ ದಿ.ಹುಕ್ರ ಎಂಬವರ ಪತ್ನಿ ಗಿರಿಜಾ (50) ಮೃತಪಟ್ಟವರು.
ಮೃತ ಗಿರಿಜಾ ಅವರ ಮನೆಯವರು ಅಡಿಕೆ ಹೆಕ್ಕಲು ಹೋದಾಗ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಗಿರಿಜಾ ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತರು ಪುತ್ರ ಲೋಕೇಶ್ ಅವರನ್ನು ಅಗಲಿದ್ದಾರೆ.