ಸಿಡಿಲಿಗೆ ಸುಟ್ಟು ಹೋದ ಫೊಟೋ ಸ್ಟುಡಿಯೋ: ಲಕ್ಷಾಂತರ ರೂ. ಹಾನಿ!

ಪುತ್ತೂರು: ಪುತ್ತೂರು  ಮುಖ್ಯ ರಸ್ತೆಯಲ್ಲಿರುವ ಪೋಟೋ ಡೆವಲಪ್ ಸ್ಟುಡಿಯೋ ಆಡ್ ಲ್ಯಾಬ್ ಮಂಗಳವಾರ ಮಧ್ಯಾಹ್ನ ಬಂದ ಸಿಡಿಲಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸರಣಿ ಸಿಡಿಲು ಬಂದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕಂಪ್ಯೂಟರ್ ಸೇರಿ ಎಲ್ಲಾ ಉಪಕರಣಗಳು ಸುಟ್ಟು ಹೋಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಯವರು ಬೆಂಕಿ ಶಮನ ಮಾಡುವ ಕಾರ್ಯ ಮಾಡಿದ್ದು, ಅಗ್ನಿಶಾಮಕ ದಳ ಆಗಮಿಸಿ ಸುಟ್ಟವಸ್ತುಗಳನ್ನು ಹಾಗೂ ಬೆಂಕಿಗೆ ತೀವ್ರ ಗೊಳ್ಳಲು ಸಹಕರಿಸುವ ವಸ್ತುಗಳನ್ನು ಹೊರ ಹಾಕುವ ಕಾರ್ಯ ಮಾಡಿದರು. ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಜನತೆಯ ಕೈಗೆಟುಕುವ ದರದಲ್ಲಿ ಪೋಟೋ ಡೆವಲಪರ್ ಮಾಡುವ ಸಂಸ್ಥೆಯಾಗಿ ಆಡ್ ಲ್ಯಾಬ್ ಕಾರ್ಯನಿರ್ವಹಿಸುತಿತ್ತು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top