ಪಡಿತರ ಚೀಟಿ ತಿದ್ದುಪಡಿ ಅವಧಿ ವಿಸ್ತರಣೆ

ಮಂಗಳೂರು: ಪಡಿತರ ಚೀಟಿ ತಿದ್ದುಪಡಿಗೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯನ್ನು ಅ. 19ರಿಂದ ಅ. 21ರವರೆಗೆ ನಿಗದಿ ಮಾಡಲಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ವರ್ ಸಮಸ್ಯೆ ಉಂಟಾಗಿದ್ದ ಕೆಲವು ಜಿಲ್ಲೆಗಳಲ್ಲಿ ಈ ತಿದ್ದುಪಡಿ ವಿಸ್ತರಣೆಗೆ ಅವಕಾಶ ನೀಡಲಾಗಿದೆ. ತಿದ್ದುಪಡಿ ವೇಳೆ ಮೃತರ ಹೆಸರನ್ನು ತೆಗೆದು ಹಾಕುವುದು ಹಾಗೂ ವಿವಾಹವಾಗಿ ಬಂದವರ ಹೆಸರನ್ನು ಪಡಿತರ ಚೀಟಿಗೆ ಸೇರ್ಪಡೆಗೊಳಿಸಲು ಅವಕಾಶ ಇರುತ್ತದೆ. ಸೂಕ್ತ ದಾಖಲೆಗಳೊಂದಿಗೆ ವಿಳಾಸ ಸೇರಿದಂತೆ ಈ ತಿದ್ದುಪಡಿಗಳನ್ನು ಮಾಡಬಹುದು. ಆದರೆ ಹೊಸ ಪಡಿತರ ಚೀಟಿಗೆ ಸದ್ಯ ರಾಜ್ಯದಿಂದ ಅವಕಾಶ ದೊರಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top