ನೀವು ಉತ್ತಮ ಭಾಷಣಗಾರರಾಗಬೇಕೇ? ಉತ್ತಮ ನಿರೂಪಕರಾಗಬೇಕೇ? | ಪ್ರೇರಣಾ ಸಂಸ್ಥೆ ನಿಮಗಾಗಿ ಹೊಸ ಅವಕಾಶವೊಂದನ್ನು ತೆರೆದಿಟ್ಟಿದೆ

ಪುತ್ತೂರು: ನೆರೆದಿರುವ ದೊಡ್ಡ ಸಭೆಯ ಮುಂದೆ ನಿಂತು ನಿರರ್ಗಳವಾಗಿ ಭಾಷಣ ಮಾಡಬೇಕು. ಅಂಜಿಕೆಯ ಸುಳಿವೇ ಇಲ್ಲದೇ ತುಂಬಿದ ಸಭೆ ಮೂಕವಿಸ್ಮಿತರಾಗುವಂತೆ ನಿರೂಪಣೆ (ಎಂ.ಸಿ.) ಮಾಡಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಇದನ್ನು ನಿಜ ಜೀವನದಲ್ಲಿ ಸಾಧ್ಯವಾಗಿಸುವುದು ಹೇಗೆ?

ಕನಸುಗಳನ್ನೇನೋ ಸಹಜವಾಗಿ ಕಟ್ಟಿಕೊಂಡು ಬಿಡುತ್ತೇವೆ. ಆದರೆ ಇಂತಹ ಕನಸುಗಳನ್ನು ಸುಲಭವಾಗಿ ನನಸು ಮಾಡಬೇಕಾದರೆ ಸೂಕ್ತ ತರಬೇತಿ ಕೇಂದ್ರಗಳನ್ನೇ ಸಂಪರ್ಕಿಸಬೇಕು.

ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಭಾಷಣ ಹಾಗೂ ನಿರೂಪಣಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪ್ರಯತ್ನಕ್ಕೆ ಪ್ರೇರಣಾ ಸಂಸ್ಥೆ ಮುಂದಾಗಿದೆ. ನೀವು ಆಸಕ್ತರೇ ಆಗಿದ್ದರೆ, ಅಕ್ಟೋಬರ್ 19 ಹಾಗೂ 20ರಂದು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆಯುವ ಭಾಷಣ ಮತ್ತು ನಿರೂಪಣಾ ತರಬೇತಿಯಲ್ಲಿ ಪಾಲ್ಗೊಳ್ಳಿ. ಉಪಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುವುದು. ಅಂದ ಹಾಗೇ, ದಸರಾ ರಜೆ ಹಿನ್ನೆಲೆಯಲ್ಲಿ ಈ ತರಬೇತಿಯು 5ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.































 
 

IAS, IFS, CA / CMA, NEET / KCET, SPOKEN ENGLISH, TUITION FOR PU ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಹುರಿಗೊಳಿಸುತ್ತಿರುವ ಪ್ರೇರಣಾ ಸಂಸ್ಥೆ, ಭಾಷಣ ಹಾಗೂ ನಿರೂಪಣೆಯಲ್ಲಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುವಲ್ಲಿಯೂ ಎತ್ತಿದ ಕೈ. ಈಗಾಗಲೇ ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಆ್ಯಂಕರಿಂಗ್ ಕ್ಲಾಸ್ ನಡೆಸಿದ್ದು, ತರಬೇತಿ ಪಡೆದುಕೊಂಡ ಅಭ್ಯರ್ಥಿಗಳು ಯಶಸ್ವಿ ಭಾಷಣಗಾರರಾಗಿ, ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯರಿಗೂ ಭಾಷಣ ಹಾಗೂ ನಿರೂಪಣೆಯ ತರಬೇತಿ ನೀಡಲಾಗಿದೆ.

ಇದೀಗ ಆರಂಭವಾಗುತ್ತಿರುವ ಎರಡು ದಿನಗಳ ಭಾಷಣ ಹಾಗೂ ನಿರೂಪಣಾ ತರಬೇತಿಯ ಹೆಚ್ಚಿನ ಮಾಹಿತಿಗಾಗಿ 8904877721, 7204977721, 08251- 200721 ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top