- ವಾರಾಂರಂಭದಲ್ಲಿ ಕೃಷಿಕರಲ್ಲಿ ಮಂದಹಾಸ ಮೂಡಿಸಿದ ರಬ್ಬರ್
ಪುತ್ತೂರು: ವಾರಾರಂಭ ಮಾರುಕಟ್ಟೆ ತೆರೆದುಕೊಳ್ಳುತ್ತಿದ್ದಂತೆ, ರಬ್ಬರ್ ಕೃಷಿಕರಲ್ಲಿ ತುಸು ಗೆಲುವು ಕಾಣಿಸಿಕೊಂಡಿದೆ. ಕಾರಣ ಕಳೆದೆರಡು ದಿನಗಳಿಂದ ಏರಿಕೆ ಹಾದಿಯಲ್ಲಿರುವ ರಬ್ಬರ್ ಧಾರಣೆ ಮತ್ತೆ ಸಣ್ಣದಾಗಿ ಧಾರಣೆ ಏರಿಸಿಕೊಂಡಿದೆ. ಅಡಿಕೆ ಡಬ್ಬಲ್ ಚೋಲ್ ಮತ್ತದೇ ಏರಿಳಿಕೆಯ ಹಾದಿ.
ಸೋಮವಾರ ಹೊಸಅಡಿಕೆ 325- 365 ರೂ., ಹಳೆ ಅಡಿಕೆ 380 -420 ರೂ. ಹಾಗೂ 420-425 ರೂ.ನಲ್ಲಿದೆ (ಗುಣಮಟ್ಟ). ಡಬ್ಬಲ್ ಚೋಲ್ 390 – 460 ರೂ. ಹಾಗೂ 460- 485 ರೂ. (ಗುಣಮಟ್ಟ)ನಲ್ಲಿದೆ.
ಶನಿವಾರ ಡಬ್ಬಲ್ ಚೋಲ್ 390 – 462 ರೂ. ಹಾಗೂ 463- 485 ರೂ. (ಗುಣಮಟ್ಟ)ನಲ್ಲಿತ್ತು.
ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-83 ರೂ.ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ರಬ್ಬರ್ ಆರ್.ಎಸ್.ಎಸ್4 148.00 ರೂ., ಆರ್.ಎಸ್.ಎಸ್ 5 139.00 ರೂ., ಲಾಟ್ 130.00 ರೂ., ಸ್ಕ್ರಾಪ್ 77.00 ರಿಂದ 87.00 ರೂ.ನಲ್ಲಿದೆ.
ಶನಿವಾರ ರಬ್ಬರ್ ಆರ್.ಎಸ್.ಎಸ್4 146.50 ರೂ., ಆರ್.ಎಸ್.ಎಸ್ 5 137.50 ರೂ., ಲಾಟ್ 128.50 ರೂ., ಸ್ಕ್ರಾಪ್ 76.00 ರಿಂದ 86.00 ರೂ.ನಲ್ಲಿತ್ತು.