ಆಟೋ ರಿಕ್ಷಾವೊಂದಕ್ಕೆ ಹಠಾತ್ತನೇ ಬೆಂಕಿ ತಗುಲಿ ಇಬ್ಬರು ಸಜೀವ ದಹನವಾದ ಘಟನೆ ಕಣ್ಣೂರಿನ ಕತಿರೂರಿನಲ್ಲಿ ನಡೆದಿದೆ.
ಅಪಘಾತದಲ್ಲಿ ಚಾಲಕ ಅಭಿಲಾಷ್ (37) ಮತ್ತು ಆತನ ಸ್ನೇಹಿತ ಸಜೀಶ್ (36) ಸುಟ್ಟು ಕರಕಲಾಗಿದ್ದಾರೆ.
ಆಟೋರಿಕ್ಷಾ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಟೋ ಪಲ್ಟಿಯಾಗಿದ್ದು, ಸಿಎನ್ ಜಿ ಸಿಲಿಂಡರ್ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಆಟೋ ರಿಕ್ಷಾದ ಹತ್ತಿರಕ್ಕೂ ಹೋಗಲು ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಪೊಲೀಸರು ಮೃತದೇಹಗಳನ್ನು ಹೊರ ತೆಗೆಯಲಾಯಿತು. ಮೃತರಿಬ್ಬರ ಶವಗಳು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಅವರನ್ನು ಗುರುತಿಸಲು ಸಾಕಷ್ಟು ಸಮಯ ಹಿಡಿಯಿತು.
ಪೊಲೀಸರು ಆಟೋದಲ್ಲಿದ್ದ ಲೈಸೆನ್ಸ್ ಪ್ಲೇಟ್ ಮೂಲಕ ಮಾಲಕರ ವಿವರ ಸಂಗ್ರಹಿಸಿದ್ದಾರೆ. ಸಜೀಶ್ ತನ್ನ ಸಹೋದರಿಯ ಮನೆಗೆ ಭೇಟಿ ನೀಡಲು ಅಭಿಲಾಷ್ ಆಟೋದಲಿ ಬರುತ್ತಿದ್ದರು. ಎಂದು ತಿಳಿದು ಬಂದಿದೆ. ಸಹೋದರಿಯ ಮನೆಯಿಂದ ಕೇವಲ ನೂರು ಮೀಟರ್ ದೂರದಲ್ಲಿ ದುರಂತ ಸಂಭವಿಸಿದೆ. ಅಭಿಲಾಷ್ ಆರು ತಿಂಗಳ ಹಿಂದೆಯಷ್ಟೇ ಆಟೋ ಖರೀದಿಸಿದರು.