ರಾಷ್ಟ್ರಮಟ್ಟದ ಇನ್‍ಸ್ಪೆಯರ್ ಅವಾರ್ಡ್ ಮನಕ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ಭಾಗಿ

ಪುತ್ತೂರು: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅ.9 ರಿಂದ 11ರ ವರೆಗೆ ನವದೆಹಲಿಯಲ್ಲಿ ನಡೆಸಿದ 2021-22ನೇ ಸಾಲಿನ ಇನ್‍ಸ್ಪೆಯರ್ ಅವಾರ್ಡ್ ಮನಕ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ಭಾಗವಹಿಸಿ, ತಮ್ಮ “Medicinal wax from Kokum seeds” (Ko-Wax) ವಿಜ್ಞಾನ ಯೋಜನೆಯನ್ನು ಪ್ರಸ್ತುತಪಡಿಸಿದ್ದಾರೆ.

ಪೃಥ್ವಿರಾಜ್ ಪ್ರಭು ಮುಕ್ರಂಪಾಡಿ ನಿವಾಸಿ ಪುಂಡಲೀಕ ಪ್ರಭು ಹಾಗೂ ನಾಗಮಣಿ ಪ್ರಭು ದಂಪತಿ ಪುತ್ರ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವಾಗ ವಿಜ್ಞಾನ ಯೋಜನೆಯನ್ನು ತಯಾರಿಸಿ, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.

ಆ ಶೈಕ್ಷಣಿಕ ವರ್ಷದಲ್ಲಿ ಕೊರೋನ ಕಾರಣದಿಂದಾಗಿ ಸ್ಪರ್ಧೆಗಳು ನಡೆಯದಿರುವ ಕಾರಣ ಮುಂದೂಡಲ್ಪಟ್ಟ ಸ್ಪರ್ಧೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆದಿವೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top