13-10-2023ರ ಕೃಷಿ ಮಾರುಕಟ್ಟೆ ಧಾರಣೆ

  • ಏರು ಹಾದಿಯಲ್ಲಿ ರಬ್ಬರ್, ಇಳಿಕೆ ಹಾದಿಯಲ್ಲಿ ಅಡಿಕೆ

ಪುತ್ತೂರು: ಶುಕ್ರವಾರದ ಮಾರುಕಟ್ಟೆ ಧಾರಣೆಯನ್ನು ಗಮನಿಸಿದರೆ, ಗುರುವಾರದ ಧಾರಣೆಯನ್ನೇ ಮುಂದುವರಿಸಿದಂತಿದೆ. ಗುರುವಾರ ಅಡಿಕೆ ಇಳಿಕೆ ಹಾದಿಯಲ್ಲಿದ್ದರೆ, ರಬ್ಬರ್ ಕೊಂಚ ಏರುಗತಿಯಲ್ಲಿತ್ತು. ಶುಕ್ರವಾರವೂ ಇದೇ ಹಾದಿ.

ಹೊಸಅಡಿಕೆ 325- 365 ರೂ., 5 ರೂ. ಇಳಿಕೆ ಕಂಡಿರುವ ಹಳೆ ಅಡಿಕೆ 380 -425 ರೂ. ಹಾಗೂ 425-430 ರೂ.ನಲ್ಲಿದೆ (ಗುಣಮಟ್ಟ). ಇನ್ನು ಕ್ರಮವಾಗಿ 2 ರೂ. ಹಾಗೂ 1 ರೂ. ಇಳಿಕೆ ಕಂಡಿರುವ ಡಬ್ಬಲ್ ಚೋಲ್ 390 – 468 ರೂ. ಹಾಗೂ 469- 485 ರೂ. (ಗುಣಮಟ್ಟ)ನಲ್ಲಿದೆ.

ಯಥಾಸ್ಥಿತಿ ಮಾರುಕಟ್ಟೆ ಧಾರಣೆ ಕಾಯ್ದುಕೊಂಡಿರುವ ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-73 ರೂ.ನಲ್ಲಿದೆ.































 
 

ಇನ್ನೊಂದೆಡೆ ರಬ್ಬರ್ ಧಾರಣೆಯನ್ನು ಗಮನಿಸುವುದಾದರೆ 1 ರೂ. ಏರಿಕೆ ಕಂಡುಬಂದಿದ್ದು, ತುಸು ಗೆಲುವಿನ ನಗೆಯನ್ನು ಬೀರಿಸಿದೆ. ಶುಕ್ರವಾರ ರಬ್ಬರ್ ಆರ್.ಎಸ್.ಎಸ್4 146.00 ರೂ., ಆರ್.ಎಸ್.ಎಸ್ 5 137.00 ರೂ., ಲಾಟ್ 128.50 ರೂ., ಸ್ಕ್ರಾಪ್ 76.00 ರಿಂದ 86.00 ರೂ. ಇದೆ. ಗುರುವಾರ ರಬ್ಬರ್ ಆರ್.ಎಸ್.ಎಸ್4 145.00 ರೂ., ಆರ್.ಎಸ್.ಎಸ್ 5 136.50 ರೂ., ಲಾಟ್ 127.50 ರೂ., ಸ್ಕ್ರಾಪ್ 74.50 ರಿಂದ 84.50 ರೂ.ನಲ್ಲಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top