ಕಲಿತ ಶಾಲೆಗೆ ಲಕ್ಷ ರೂ. ದೇಣಿಗೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್.ಎಸ್.ಪಿ.ಯು. ಕಾಲೇಜಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಉದ್ಯಮಿ ರಾಕೇಶ್ ಬೆಂಗಳೂರು ಅವರು 1 ಲಕ್ಷ ರೂ. ದೇಣಿಗೆ ನೀಡಿದರು.

ಬುಧವಾರ ಕಾಲೇಜಿಗೆ ಆಗಮಿಸಿದ ಅವರು, ಪ್ರಾಂಶುಪಾಲ ಸೋಮಶೇಖರ್ ನಾಯಕ್ ಅವರಿಗೆ ದೇಣಿಗೆಯ ಚೆಕ್ ಹಸ್ತಾಂತರಿಸಿದರು. ಕಾಲೇಜಿನಲ್ಲಿ ನಡೆಯುವ ಸ್ಪರ್ಧಾತ್ಮಕ ಪರಿಕ್ಷಾ ತರಬೇತಿ ಕಾರ್ಯಕ್ಕೆ, ಕಾಲೇಜಿನ ಗಾರ್ಡನಿಂಗ್, ತೂಗು ಹೂದಾನಿ ಅಳವಡಿಕೆ ಮತ್ತು ಹೂದಾನಿ ಅಳವಡಿಕೆಗಾಗಿ ಈ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.

ಈ ಸಂದರ್ಭ ಉಪನ್ಯಾಸಕರಾದ ಸವಿತಾ ಕೈಲಾಸ್, ಜ್ಯೋತಿ ಪಿ. ರೈ, ಸೌಮ್ಯಾ ದಿನೇಶ್, ಸುಧಾ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top