ಮೈಮೇಲೆ ಹರಿದ ಕಾರು: ಯುವಕ ಸ್ಥಳದಲ್ಲೇ ಮೃತ್ಯು!

ಮಂಗಳೂರು: ದ್ವಿಚಕ್ರ ವಾಹನ ಸವಾರರೊಬ್ಬರ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಕುಂಟಿಕಾನದಲ್ಲಿ ನಡೆದಿದೆ.

ಕಾವೂರು ನಿವಾಸಿ ಕೌಶಿಕ್ (21) ಮೃತಪಟ್ಟ ದುರ್ದೈವಿ.

ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯಿಂದ ಹೊರಬರುತ್ತಿದ್ದ ದ್ವಿಚಕ್ರ ವಾಹನ ರಿಕ್ಷಾವೊಂದಕ್ಕೆ ತಗುಲಿ ಅಡ್ಡಬಿದ್ದಿದೆ. ಈ ವೇಳೆ ಸವಾರ ನೆಲಕ್ಕೆ ಬಿದ್ದಾಗ ಅವರ ಮೇಲೆ ಏಕಾಏಕಿ ಕಾರು ಹರಿದಿದೆ. ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top