ನಿಮಗಿನ್ನೂ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌ ಬಂದಿಲ್ಲವೇ? ಗೊಂದಲ ಬೇಡ. ಈ ವರದಿ ಓದಿ

ಪುತ್ತೂರು: ನಿಮ್ಮ ಪಕ್ಕ ಕುಳಿತವರು, ಗೆಳೆಯರಿಗೆ, ಕುಟುಂಬಸ್ಥರ ಮೊಬೈಲ್‌ಗಳಿಗೆಲ್ಲ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌ ಬಂದಿದೆ. ಆದರೆ, ನಿಮ್ಮ ಮೊಬೈಲ್‌ಗೆ ಮಾತ್ರ ಈ ಮೆಸೇಜ್‌ ಬಂದಿಲ್ಲವೇ? ಅದಕ್ಕೆ ಹಲವು ಕಾರಣಗಳಿವೆ.

ಹೌದು, ದೇಶದ ಕೋಟ್ಯಂತರ ಜನರಿಗೆ ಎಮರ್ಜೆನ್ಸಿ ಅಲರ್ಟ್- ಎಕ್ಸ್‌ಟ್ರೀಮ್ ಎಂಬ ಸಂದೇಶ ರವಾನಿಸಲಾಗಿದೆ. ಈ ಸಂದೇಶವನ್ನು ಪ್ರಾಯೋಗಿಕವಾಗಿ ಕೇಂದ್ರ ಟೆಲಿಕಾಂ ಸಚಿವಾಲಯ ಕಳುಹಿಸಿದೆ. ಈ ಅಲರ್ಟ್‌ ಸುಮಾರು 11:35ಕ್ಕೆ ಫ್ಲ್ಯಾಶ್ ಸಂದೇಶ ಮತ್ತು ಆಂಡ್ರಾಯ್ಡ್ ಮತ್ತು ಐಫೋನ್‌ಗಳಿಗೆ ತುರ್ತು ಧ್ವನಿಯೊಂದಿಗೆ ಕಳುಹಿಸಿದೆ. ಒಮ್ಮೆ ಇಂಗ್ಲಿಷ್‌ನಲ್ಲಿ ಮತ್ತು ಕೆಲವೇ ಅಂತರದಲ್ಲಿ ಮತ್ತೊಮ್ಮೆ ಕನ್ನಡದಲ್ಲಿ ಎರಡು ಬಾರಿ ಈ ಸಂದೇಶವನ್ನು ಕಳುಹಿಸಲಾಗಿದೆ.

ನೈಸರ್ಗಿಕ ವಿಕೋಪ ಸೇರಿ ಹಲವು ತುರ್ತು ಸಂದರ್ಭಗಳಲ್ಲಿ ಜನರಿಗೆ ಸಂದೇಶದ ಮೂಲಕ ಎಚ್ಚರಿಸಲು, ಅವರು ಬೇರೆಡೆ ಸ್ಥಳಾಂತರಗೊಳ್ಳುವುದು ಸೇರಿ ಹಲವು ಮುಂಜಾಗ್ರತಾ ತೆಗೆದುಕೊಳ್ಳಲು ನೆರವಾಗಲಿ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ವ್ಯವಸ್ಥೆ ಜಾರಿಗೆ ತರುತ್ತಿದೆ. ಎಲ್ಲರಿಗೂ ಮೆಸೇಜ್‌ ಹೋಗುತ್ತದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಪ್ರಾಯೋಗಿಕವಾಗಿ ಕೇಂದ್ರ ಸರ್ಕಾರ ಮೆಸೇಜ್‌ ಕಳುಹಿಸಿದೆ. ಆದರೆ, ಇನ್ನೂ ಒಂದಷ್ಟು ಜನರಿಗೆ ಮೆಸೇಜ್‌ ಬಂದಿಲ್ಲ. ಕಾರಣ ಏನು ಎಂಬ ಪ್ರಶ್ನೆ ಕಾಡಲು ಶುರು ಆಗಿದೆ.































 
 

ಮೆಸೇಜ್‌ ಬರದಿರಲು ಇವೆಲ್ಲ ಕಾರಣ

  • ಎಲ್ಲರಿಗೂ ಒಮ್ಮೆಯೇ ಟೆಲಿಕಾಂ ಇಲಾಖೆ ಮೆಸೇಜ್‌ ಕಳುಹಿಸಿಲ್ಲ. ಅಕ್ಟೋಬರ್‌ 12ರಂದು ಮೊದಲು ಏರ್‌ಟೆಲ್‌ ಗ್ರಾಹಕರಿಗೆ ಮೆಸೇಜ್‌ ರವಾನೆಯಾಗಿದೆ. ನಂತರ ಜಿಯೋ ಸೇರಿ ಹಲವು ಸಿಮ್‌ ಹೊಂದಿದವರಿಗೆ ಮೆಸೇಜ್‌ ಕಳುಹಿಸಲಾಗಿದೆ. ಹಾಗಾಗಿ, ಬೇರೆ ಸಿಮ್‌ ಹೊಂದಿದ್ದರೆ ತಕ್ಷಣಕ್ಕೆ ಮೆಸೇಜ್‌ ಬಂದಿರಲಿಕ್ಕಿಲ್ಲ.
  • ಮೆಸೇಜ್‌ ರವಾನೆಯಾಗಲು ಅರ್ಧ ಗಂಟೆಯ ಅವಧಿ ಫಿಕ್ಸ್‌ ಮಾಡಲಾಗಿದೆ. ಈ ಅವಧಿಯಲ್ಲಿ ನಿಮ್ಮ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದ್ದರೆ, ಫ್ಲೈಟ್‌ ಮೋಡ್‌ಗೆ ಹಾಕಿದ್ದರೆ ಅಥವಾ ನೀವು ನೆಟ್‌ವರ್ಕ್‌ ಬಾರದ ಕಡೆ ಇದ್ದರೆ ಮೆಸೇಜ್‌ ಬಂದಿರುವುದಿಲ್ಲ.
  • ಮೊಬೈಲ್‌ನಲ್ಲಿರುವ ಸೆಟ್ಟಿಂಗ್‌ ಕೂಡ ಇದಕ್ಕೆ ಕಾರಣ ಇರಬಹುದು. ಸ್ಮಾರ್ಟ್‌ಫೋನ್‌ನಲ್ಲಿ ಮೊಬೈಲ್‌ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ, ಅಲ್ಲಿ “ವೈರ್‌ಲೆಸ್‌ ಎಮರ್ಜೆನ್ಸಿ ನೋಟಿಫಿಕೇಶನ್”‌ ಆನ್‌ ಮಾಡಬೇಕು.

ಅಲರ್ಟ್ ಸಂದೇಶದಲ್ಲಿ ಏನಿದೆ?

ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅನುಷ್ಠಾನಗೊಳಿಸುತ್ತಿರುವ ಟೆಸ್ಟ್ TEST) ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಬಳಕೆದಾರರಿಗೆ ಕಳುಹಿಸಲಾದ ಫ್ಲ್ಯಾಶ್ ಸಂದೇಶದಲ್ಲಿ ಬರೆಯಲಾಗಿದೆ.

ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಜುಲೈ 20, ಆಗಸ್ಟ್ 17 ಮತ್ತು ಸೆಪ್ಟೆಂಬರ್ 15ರಂದು ಇದೇ ರೀತಿಯ ಪರೀಕ್ಷಾ ಎಚ್ಚರಿಕೆಗಳನ್ನು ಸ್ವೀಕರಿಸಿದ್ದಾರೆ. ಜನರ ಫೋನ್‌ಗಳಲ್ಲಿ ಫ್ಲ್ಯಾಸ್ ನೋಟಿಫಿಕೇಷನ್, ಪ್ರವಾಹ ಅಥವಾ ಭೂಕುಸಿತದಂತಹ ತುರ್ತು ಸಮಯದಲ್ಲಿ ಜನರನ್ನು ಎಚ್ಚರಿಸಲು ಸರ್ಕಾರವು ವಿನ್ಯಾಸಗೊಳಿಸಿದ ವ್ಯವಸ್ಥೆಯ ಭಾಗವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top