ಲಕ್ಕೋ: ಎರಡು ಕಬಡ್ಡಿ ತಂಡಗಳ ಆಟಗಾರರ ನಡುವೆ ಮಾರಾಮಾರಿ ನಡೆದಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿದೆ. ಕಬಡ್ಡಿ ಪಂದ್ಯ ನಡೆಯುತ್ತಿದ್ದ ಗ್ರೌಂಡ್’ನಲ್ಲಿ ಎರಡು ತಂಡಗಳು ಹೊಡೆದಾಡಿಕೊಂಡಿದೆ. ಆಟಗಾರರು ಪರಸ್ಪರ ಹಲ್ಲೆ ನಡೆಸಿದ್ದು, ಮೈದಾನದಲ್ಲಿದ್ದ ಕುರ್ಚಿಗಳನ್ನು ಪುಡಿಗೈದಿದ್ದಾರೆ. ತಂಡಗಳ ಆಟಗಾರರು ಒಬ್ಬರನ್ನೊಬ್ಬರು ಒದೆಯುವುದು, ಕೆಲವರು ಪರಸ್ಪರ ಕುರ್ಚಿಗಳನ್ನು ಎಸೆಯುವುದನ್ನು ವೀಡಿಯೊದಲ್ಲಿ ಕಾಣಬಹುದು.
ವರದಿಯ ಪ್ರಕಾರ, ಎರಡೂ ತಂಡಗಳು ಕಾನ್ಸುರದ ಹೊರಗಿನ ತಂಡವಾಗಿದ್ದು, ಎರಡೂ ತಂಡಗಳು ಸ್ಪರ್ಧೆಯಿಂದ ಅನರ್ಹಗೊಂಡಿವೆ. ಮಾರಾಮಾರಿಗೆ ಕಾರಣಗಳು ತಿಳಿದು ಬಂದಿಲ್ಲ. ಕಾನ್ಪುರ ಐಐಟಿ ಇನ್ನಷ್ಟೇ ಮಾಹಿತಿ ನೀಡಬೇಕಿದೆ.