ಕೃಷಿ ಜಮೀನು ಅತಿಕ್ರಮಣ | ಆದಿವಾಸಿ ಬುಡಕಟ್ಟು ಮಲೆಕುಡಿಯರಿಂದ ಆರೋಪ

ಸುಬ್ರಹ್ಮಣ್ಯ: ಗ್ರಾಮದ ದೇವರಗದ್ದೆ ನಿವಾಸಿ ಮಲೆಕುಡಿಯ ಜನಾಂಗದ ವ್ಯಕ್ತಿಯೊಬ್ಬರಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನೀಡಿದ ಜಮೀನನ್ನು ತನ್ನ ಹೆಸರಿಗೆ ಆರ್ ಟಿಸಿ ಮಾಡಿಕೊಂಡಿದ್ದು, ಈ ಕುರಿತು ಭೂಮಾಪನ ಇಲಾಖೆಯಿಂದ ಸರ್ವೇ ಮಾಡಿ ಸೂಕ್ತ ನ್ಯಾಯ ನೀಡದಿರುವುದು ಖಂಡನೀಯ ಎಂದು ಬಿರ್ಸಾಮುಂಡ ಟ್ರೈಬಲ್ ಕಮ್ಯುನಿಟಿ ಡೆವಲಪ್ಮೆಂಟ್ ಟ್ರಸ್ಟ್ ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಭಾಸ್ಕರ್ ಬೆಂಡೋಡಿ ಆರೋಪಿಸಿದ್ದಾರೆ.

ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ಸರ್ವೇ ನಂಬರ್ 101/1 ರಲ್ಲಿ ಸುಮಾರು 60 ವರ್ಷಕ್ಕೂ ಮೇಲ್ಪಟ್ಟು ನಾಲ್ಕು ಬಡ ಕುಟುಂಬಗಳು ಖಾಯಂ ವಾಸ್ತವ್ಯದೊಂದಿಗೆ ಜಮೀನು ಹೊಂದಿರುತ್ತಾರೆ. ಅಲ್ಲದೆ 1960ರಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಾಲಿಗೇಣಿ ನೀಡಿರುತ್ತಾರೆ.1974- 75ರಲ್ಲಿ ಖಾಯಂ ಹಕ್ಕು ಪತ್ರ ಮಂಜೂರು ಕೂಡ ಆಗಿದೆ ಎಂದು ಅವರು ತಿಳಿಸಿದರು.

ಇದೀಗ ವಾಸ್ತವ್ಯಕ್ಕೆ ಮನೆ ಇಲ್ಲವಾಗಿದ್ದು ಕೃಷಿ ಹೊಂದಿರುವ ಸ್ವಂತ ಜಮೀನಿನಲ್ಲಿ ಹೊಸ ಮನೆ ನಿರ್ಮಿಸಲು ಸದರಿಯವರು ಬೆದರಿಕೆ ಹಾಕುತ್ತಿದ್ದು, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಗೆ ದೂರು ನೀಡಿ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಖಂಡನೀಯ. ಆದ್ದರಿಂದ ಸರಕಾರ ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅವರು ಅಗ್ರಹಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top