ಪುತ್ತೂರು: ಬಡವರ ಸೇವೆ ಮಾಡಲು ಉತ್ತಮ ಅವಕಾಶ ಸಿಕ್ಕಿದೆ. ಪ್ರತಿಯೊಂದು ಕಡೆಗಳಲ್ಲೂ ಬಡವರಿಗೆ ನಾವು ಸಹಾಯ ಮಾಡುವ ಮೂಲಕ ಪಕ್ಷವನ್ನು ಬೆಳಸಬೇಕು. ನನ್ನ ಒಂದು ಕಣ್ಣು ಸದಾ ಬಡವರ ಮೇಲೆಯೇ ಇರುತ್ತದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಸರಕಾರದ ಐದು ಗ್ಯಾರಂಟಿ ಯೋಜನೆ ಕಾಂಗ್ರೆಸ್ ನ ಯೋಜನೆ ಎಂದು ಮನವರಿಕೆ ಮಾಡಿಕೊಡುವ ಕೆಲಸವನ್ನು ಪಕ್ಷದ ಪ್ರತಿಯೊಬ್ಬರೂ ಮಾಡಬೇಕು. ಹಾಗದಲ್ಲಿ ಮಾತ್ರ ಪಕ್ಷವನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಲಯ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶ:
ಪಕ್ಷದ ಕಾರ್ಯಕರ್ತರ ಸಮಾವೇಶ ವಲಯ ಮಟ್ಟದಲ್ಲಿ ಮಾಡಬೇಕಿದೆ. ಮಹಿಳಾ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಪಕ್ಷಕ್ಕೆ ಸೇರಿಸುವವರನ್ನು ವಲಯ ಮಟ್ಟದ ಸಭೆಯಲ್ಲಿ ಸೇರಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಬಲವರ್ಧನೆಗೆ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು. ಬ್ಲಾಕಿನ ವಿವಿಧ ಘಟಕಗಳು, ಯುವ ಕಾಂಗ್ರೆಸ್, ಮಹಿಳಾ ಘಟಕ, ವಿದ್ಯಾರ್ಥಿ ಘಟಕ ಎಲ್ಲರೂ ಸೇರಿ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಕಾಂಗ್ರೆಸ್ ಮುಖಂಡರಾದ ದುರ್ಗಾಪ್ರಸಾದ್ ರೈ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಮೊದಲಾದವರು ಮಾತನಾಡಿದರು. ಪಕ್ಷದ ಮುಖಂಡರುಗಳಾದ ಮಹಾಲಿಂಗ ನಾಯ್ಕ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ಅಶೋಕ್ ಪೂಜಾರಿ ಬೊಳ್ಳಾಡಿ, ನಗರಸಭಾ ಸದಸ್ಯರಾದ ರಿಯಾಝ್ ಪರ್ಲಡ್ಕ, ರವೀಂದ್ರ ರೈ ನೆಕ್ಕಿಲು, ವೇದನಾಥ ಸುವರ್ಣ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಾಮ ಮೇನಾಲ, ಉಮ್ಮರ್ ಜನಪ್ರಿಯ, ಬಾಬುಮರಿಕೆ, ಸಲಾಂ ಸಂಪ್ಯ, ಗ್ರಾಪಂ ಸದಸ್ಯ ರಹಿಮಾನ್ ಕಾವು, ಕಲಾವತಿ, ಜಯಂತಿ ಬಲ್ನಾಡು, ವಿಜಯಲಕ್ಷ್ಮೀ, ರಾಮಚಂದ್ರ ಸೊರಕೆ, ಆಲಿ ಪಾಣಾಜೆ, ಸಂಜೀವ ನಾಯ್ಕ ಸೊರಕೆ , ಶಾಹುಲ್ ಹಮೀದ್ ಪಾಣಾಜೆ, ಸುಪ್ರಿತ್ ಕಣ್ಣಾರಾಯ, ಎಡ್ವರ್ಡ್, ಹರೀಶ್ ಕುಮಾರ್ ನಿಡ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಜಯಂತ ಕೆಂಗುಡೇಲು ವಂದಿಸಿದರು. ಹಬೀಬ್ ಕಣ್ಣೂರು ಕಾರ್ಯಕ್ರಮ ನಿರ್ವಹಿಸಿದರು.