ಪುತ್ತೂರು: ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್’ನ 60ನೇ ವರ್ಷದ ಅಂಗವಾಗಿ ತಾಲೂಕಿಗೆ ಆಗಮಿಸಿದ ಶೌರ್ಯ ಜಾಗರಣಾ ರಥಕ್ಕೆ ಉಪ್ಪಿನಂಗಡಿಯಲ್ಲಿ ಸ್ವಾಗತ ಕೋರಲಾಯಿತು.
ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಥಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ತಾಲೂಕಿಗೆ ಬರ ಮಾಡಿಕೊಂಡರು.
ಉಪ್ಪಿನಂಗಡಿಯಿಂದ ಪುತ್ತೂರಿಗೆ ಆಗಮಿಸುವ ರಥಕ್ಕೆ ಬೊಳುವಾರಿನಲ್ಲಿ ಸ್ವಾಗತಿಸಲಾಗುವುದು. ಬಳಿಕ ಕಿಲ್ಲೆ ಮೈದಾನದವರೆಗೆ ಶೋಭಾಯಾತ್ರೆ ನಡೆದು, ಹಿಂದೂ ಶೌರ್ಯ ಸಂಗಮ ನಡೆಯಲಿದೆ.