ಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ದಸರಾ ಕ್ರೀಡಾಕೂಟದಲ್ಲಿ ಪುತ್ತೂರು ಮಹಿಳೆಯರ ತ್ರೋಬಾಲ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಂದ್ಯಾಟವನ್ನು ತಂಡದ ನಾಯಕಿಯಾಗಿ ಸೈಂಟ್ ವಿಕ್ಟರ್ ಫ್ರೌಡಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಪೂರ್ಣಿಮಾ, ತನುಷಾ, ಅನುಶ್ರೀ, ಭವ್ಯಾ , ಶ್ರೀನಿತಾ, ಪ್ರತಿಜ್ಞಾ, ಕೃತಿ, ಅನಿಷಾ, ವೈಷ್ಣವಿ, ಸುನಿತಾ, ಅನುಷಾ, ಭಾವನ ತಂಡವನ್ನು ಪ್ರತಿನಿಧಿಸಿದ್ದು, ಅ.10 ರಿಂದ 13ರ ತನಕ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.
ಪಟ್ಟೆ ಪ್ರತಿಭಾ ಫ್ರೌಡ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮೊನಪ್ಪ ಪಟ್ಟೆ ಹಾಗೂ ತಂಡದವರು ತರಬೇತು ನೀಡಿದ್ದಾರೆ. ತಂಡವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮತ್ತು ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಅಭಿನಂದಿಸಿದ್ದಾರೆ.
























