ಲಘು ವಿಮಾನ ಪತನ: ಇಬ್ಬರು ಭಾರತೀಯರು ಸೇರಿ ಮೂರು ಸಾವು

ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಸಂಭವಿಸಿದ ಸಣ್ಣ ವಿಮಾನ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ ಎಂದು ವರದಿಯಾಗಿದೆ.

ಅವಳಿ ಎಂಜಿನ್‌ನ ಲಘು ಪೈಪರ್ ಪಿಎ-34 ಸೆನೆಕಾ ವಿಮಾನವು ಮರಗಳು ಮತ್ತು ಪೊದೆಗಳಿಗೆ ಅಪ್ಪಳಿಸಿತು ಎಂದು ರಾಯಿಟರ್ಸ್ ವರದಿಯಾಗಿದೆ.

ವ್ಯಾಂಕೋವರ್‌’ನಿಂದ ಪೂರ್ವಕ್ಕೆ 100 ಕಿಲೋ ಮೀಟರ್ ದೂರದಲ್ಲಿರುವ ಚಿಲ್ಲಿವಾಕ್‌’ನ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ವರದಿಗಳ ಆಧಾರದ ಮೇಲೆ, ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಯು ಘಟನೆಯ ತನಿಖೆಗೆ ತನಿಖಾಧಿಕಾರಿಗಳನ್ನು ಕಳುಹಿಸಿದೆ.































 
 

ಪೈಲಟ್ ಮತ್ತು ಇತರ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top