ಬೆಂಗಳೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಗುರುವಾರ ಬೆಂಗಳೂರಿಗೆ ತೆರಳಿ ಪುನೀತ್ ಕೆರೆಹಳ್ಳಿ ಅವರನ್ನು ಭೇಟಿಯಾದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪುನೀತ್ ಕೆರೆಹಳ್ಳಿ ಅವರ ಜೊತೆ ಮಾತುಕತೆ ನಡೆಸಿ, ಬೆಂಬಲ ಸೂಚಿಸಲಾಯಿತು.
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಪುನೀತ್ ಕೆರೆಹಳ್ಳಿ ಅವರ ಮೇಲೆ ದಾಖಲೆಗಳಿಲ್ಲದೆ ಹಾಕಿರುವ ಸುಳ್ಳು ಪ್ರಕರಣಗಳಿಗೆ ತಕ್ಷಣ ಕ್ಷಮೆ ಯಾಚಿಸಲೇಬೇಕು ಮತ್ತು ಹಿಂದೂ ಸಮಾಜ ಹೋರಾಟಕ್ಕಿಳಿಯುವ ಮುನ್ನ ಕಾಂಗ್ರೇಸ್ ತನ್ನ ಹಳೆಯ ಹಿಂದೂ ವಿರೋಧಿ ಚಾಲಿಯನ್ನು ಕೈಬಿಡಬೇಕು ಎನ್ನುವ ಆಗ್ರಹ ಮಾಡಿದರು.