ವಿವೇಕ ವಿಜ್ಞಾನ 2023 ಕಾರ್ಯಾಗಾರ ಸಮಾರೋಪ | ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ: ನವೀನ್ ಸ್ಟೀಫನ್ ವೇಗಸ್

ಪುತ್ತೂರು: ವಿಜ್ಞಾನದ ಕಲಿಕೆಯಲ್ಲಿ ಅನ್ವಯ ಮತ್ತು ಸಾಂಪ್ರಾದಾಯಿಕ ಪದ್ಧತಿಯ ಕಲಿಕೆಯನ್ನು ಅಳವಡಿಸಿಕೊಂಡರೆ ವಿಜ್ಞಾನದ ವಿಷಯವೂ ಕೂಡಾ ಆಸಕ್ತಿದಾಯಕವಾಗಬಲ್ಲುದು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ ಎಂಬುದಕ್ಕೆ ಅಧ್ಯಾಪಕರ ಕಾರ್ಯಾಗಾರ ‘ವಿವೇಕ-ವಿಜ್ಞಾನ 2023’ ಸಾಕ್ಷಿಯಾಗಿದೆ ಎಂದು ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ವಿಜ್ಞಾನ ಹಾಗೂ ಗಣಿತ ಅಧ್ಯಾಪಕರ ಕಾರ್ಯಾಗಾರ ‘ವಿವೇಕ-ವಿಜ್ಞಾನ 2023’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶಿಕ್ಷಕ ವೃತ್ತಿ ಅತ್ಯಂತ ಗೌರವಯುತವಾದ ಹುದ್ದೆಯಾಗಿದ್ದು ತರಗತಿಗೆ ಪ್ರವೇಶಿಸುವ ಅಧ್ಯಾಪಕರು ಪ್ರತಿ ನಿಮಿಷ, ಪ್ರತಿ ಗಳಿಗೆ ಹೊಸತನವನ್ನು ಸಾಧಿಸುತ್ತಾ ವಿದ್ಯಾರ್ಥಿಗಳಲ್ಲಿ ನವ ಚೈತನ್ಯವನ್ನು ಮೂಡಿಸಬೇಕು. ಈ ಮೂಲಕ ವಿದ್ಯಾರ್ಥಿಗಳಲ್ಲಿರುವ ಖಾಲಿತನವನ್ನು ತುಂಬಬೇಕು. ಅಧ್ಯಾಪಕರು ತಮಗೆ ದೊರೆತಿರುವ ಸೀಮಿತ ಅವಧಿಯಲ್ಲಿ ಹೆಚ್ಚಿನ ಜ್ಞಾನವನ್ನು, ಪರಿಣತಿಯನ್ನು ಪಡೆದುಕೊಳ್ಳಬೇಕು ಎಂದರು.



































 
 

ಇನ್ನೋರ್ವ ಅತಿಥಿ ಪುತ್ತೂರು ತಾಲೂಕು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ. ಮಾತನಾಡಿ, ಇಂತಹ ಕಾರ್ಯಾಗಾರದ ವಿಚಾರಗಳನ್ನು ಶಿಕ್ಷಕರು ಪ್ರಯೋಗಕ್ಕೆ ಒಳಪಡಿಸಬೇಕು. ಇದರಿಂದ ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುತ್ತಾರೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋಪಾಲಕೃಷ್ಣ ಭಟ್ ಮಾತನಾಡಿ, ಕಲಿಕೆ ಒಂದು ನಿರಂತರ ಪ್ರಕ್ರಿಯೆ. ಶಿಕ್ಷಕರಾದವರಲ್ಲಿ ಕಲಿಯುವ ತುಡಿತ ಇರಬೇಕು. ತಮಗೆಲ್ಲಾ ತಿಳಿದಿದೆ ಎನ್ನುವ ಭಾವ ಇಟ್ಟುಕೊಳ್ಳದೇ ಹೊಸತನವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ವಿಜ್ಞಾನ ಕ್ಷೇತ್ರದಲ್ಲಿ ಪ್ರತಿ ನಿಮಿಷವೂ ಹೊಸ ಆವಿಷ್ಕಾರಗಳು ನಡೆಯುತ್ತಿರುವ ಇಂದಿನ ಯುಗದಲ್ಲಿ ಅಧ್ಯಾಪಕರು ವೃತ್ತಿ ನೈಪುಣ್ಯತೆಯನ್ನು ಗಳಿಸಿಕೊಳ್ಳಬೇಕಿದೆ. ಇಂತಹ ಕಾರ್ಯಾಗಾರಗಳು ಸಾಮೂಹಿಕ ಕಲಿಕೆಗೆ ಸಹಾಯಕವಾಗಲಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಅಧ್ಯಾಪಕರಿಗೆ ವಿಜ್ಞಾನ ಮಾದರಿಯ ಕಿಟ್ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಯಿತು.

ಕಡಬ ತಾಲೂಕು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ್ ಒಡ್ಲ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೆ.ಎನ್. ಸುಬ್ರಹ್ಮಣ್ಯ, ಪಾಪೆಮಜಲು ಪ್ರೌಢಶಾಲೆಯ ವಿಜ್ಞಾನ ಅಧ್ಯಾಪಕಿ ಇಂದಿರಾ, ಸರಕಾರಿ ಹಿರೇಬಂಡಾಡಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಹರಿಕಿರಣ್, ಪ್ರಾಂಶುಪಾಲ ಮಹೇಶ ನಿಟಿಲಾಪುರ ಭಾಗವಹಿಸಿದ್ದರು.

ಉಪನ್ಯಾಸಕಿ ಸಂಧ್ಯಾ ಸ್ವಾಗತಿಸಿ ಉಪನ್ಯಾಸಕಿ ಡಾ. ಶ್ರುತಿ ವಂದಿಸಿದರು. ಉಪನ್ಯಾಸಕಿ ಅನುಪಮಾ ಶೇಟ್ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭಕ್ಕೂ ಮುನ್ನ ಮೂಡಬಿದ್ರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್ ಬಿ. ಅವರಿಂದ ಕಲಿಕಾರ್ಥಿಯ ಮನಸ್ಥಿತಿ ಹಾಗೂ ಕಲಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರವು ಪುತ್ತೂರು ವಿವೇಕಾನಂದ ಇಂಜಿನಿಯರಿAಗ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಗೋವಿಂದರಾಜ್ ಪಿ, ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಮತ್ತು ಅಜಯ್ ಶಾಸ್ತಿçà ಅವರಿಂದ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top